ಉಡುಪಿ : ಜಿಲ್ಲಾಮಟ್ಟದ ಡಾ. ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರಕ್ಕೆ ಹೆಬ್ರಿ ತಾಲೂಕು ವರಂಗ ಗ್ರಾಮದ ವೀಣಾ ಆರ್. ಭಟ್ ಆಯ್ಕೆಯಾಗಿದ್ದಾರೆ. ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ವತಿಯಿಂದ ಮಾ. 8ರಂದು ನಡೆಯಲಿರುವ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. 2012 ರಿಂದ ಹೆಬ್ರಿ ಜೇಸಿಐ ನಲ್ಲಿ ಸಕ್ರಿಯರಾಗಿರುವ ವೀಣಾ 2014 ರಲ್ಲಿ ಜೇಸಿರೆಟ್ ಅಧ್ಯಕ್ಷರಾಗಿ, 2018 ರಲ್ಲಿ ಜೆಸಿಐನ ಪ್ರಥಮ ಮಹಿಳಾ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ವರಂಗ ವೀಣಾ ಆರ್. ಭಟ್ ಅವರಿಗೆ ಶಿವರಾಮ ಕಾರಂತ ಸಾಧಕ ಸ್ತ್ರೀ ಪ್ರಶಸ್ತಿ






























































