ಕಾರ್ಕಳ : ನಲ್ಲೂರು ಗ್ರಾಮದ ಪಾಜೆಗುಡ್ಡೆ ಎಂಬಲ್ಲಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಬ್ರಹ್ಮಾವರದ ಆರೂರು ಗ್ರಾಮದ ದಿಲೀಪ್ (34) ಎಂಬವರು ಗಾಯಗೊಂಡ ಘಟನೆ ಮಾ.3ರಂದು ಸಂಭವಿಸಿದೆ. ದಿಲೀಪ್ ಸಂಜೆ 6.15ರ ಹೊತ್ತಿಗೆ ಕಾರ್ಕಳ ಕಡೆಗೆ ಬೈಕ್‌ನಲ್ಲಿ ಬರುತ್ತಿರುವಾಗ ಎದುರಿನಿಂದ ಅತಿವೇಗವಾಗಿ ಬಂದ ಕಾರು ಬೇರೊಂದು ವಾಹನವನ್ನು ಓವರ್‌ಟೇಕ್ ಮಾಡುವಾಗ ಬಲಭಾಗಕ್ಕೆ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ದಿಲೀಪ್ ಬೈಕ್ ಸಮೇತ ರಸ್ತೆಗೆ ಬಿದ್ದು ಕೈ, ಕಾಲಿಗೆ ಗಾಯವಾಗಿದೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಲ್ಲೂರು : ಬೈಕ್‌ಗೆ ಕಾರು ಡಿಕ್ಕಿಯಾಗಿ ಸವಾರನಿಗೆ ಗಾಯ






























































