ಕಾರ್ಕಳ : ಕುಸಿದು ಬಿದ್ದು ಮಹಿಳೆ ಮೃತಪಟ್ಟ ಘಟನೆ ಎರ್ಲಪಾಡಿ ಗ್ರಾಮದ ಜಾರ್ಕಳ ಜೆಡ್ಡುವಿನಲ್ಲಿ ಮಾ.3ರಂದು ಸಂಭವಿಸಿದೆ. ಉಡುಪಿ ಭೈರಂಪಳ್ಳಿ ಗ್ರಾಮದ ಸುರೇಂದ್ರ ಎಂಬವರ ಪತ್ನಿ ಜ್ಯೋತಿ ಮೃತಪಟ್ಟ ಮಹಿಳೆ. ಜಾರ್ಕಳ ಜೆಡ್ಡುವಿನ ತವರು ಮನೆಗೆ ಬಂದಿದ್ದ ಅವರು ಮನೆಯ ಎದುರು ಕುಳಿತಿರುವಂತೆಯೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಬೈಲೂರು ಆಸ್ಪತ್ರೆಗೆ ಕರೆದೊಯ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಒಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ಮೃತಪಟ್ಟಿದ್ದಾರೆ.
ಕುಸಿದು ಬಿದ್ದು ಮಹಿಳೆ ಸಾವು






























































