ದೆಪ್ಪುತ್ತೆ ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣ : ಆರೋಪಿ ದಿಲೀಪ್‌ ಹೆಗ್ಡೆ ಜಾಮೀನು ಅರ್ಜಿ ತಿರಸ್ಕೃತ

ಕಾರ್ಕಳ : ಕಾರ್ಕಳದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಂಚಾರಿ ಪೀಠ ಅಜೆಕಾರು ಪೊಲೀಸ್ ಠಾಣೆ ವ್ಯಾಪ್ತಿಯ ದೆಪ್ಪುತ್ತೆ ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ದಿಲೀಪ್ ಹೆಗ್ಡೆಯ (28) ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ನ್ಯಾಯಾಂಗ ಬಂಧನದಲ್ಲಿರುವ ದಿಲೀಪ್ ಹೆಗ್ಡೆ ಸಲ್ಲಿಸಿದ್ದ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ್ದು ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಸಮಿವುಲ್ಲಾ ಆರೋಪಿಯ ವಿರುದ್ಧದ ಚಾರ್ಜ್‌ಶೀಟ್‌ನಲ್ಲಿರುವ ಗಂಭೀರ ಅಂಶಗಳನ್ನು ಪರಿಗಣಿಸಿ ಜಾಮೀನು ಅರ್ಜಿ ವಜಾಗೊಳಿಸಿದ್ದಾರೆ‌.
ಈ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಪ್ರತಿಮಾ ಸಲ್ಲಿಸಿರುವ ಜಾಮೀನು ಅರ್ಜಿಗೆ ಸರಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಲು ಮಾ.10ಕ್ಕೆ ದಿನಾಂಕ ನಿಗದಿಪಡಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ 20ರಂದು ಮರ್ಣೆ ಗ್ರಾಮದ ಅಜೆಕಾರು ಸಮೀಪದ ದೆಪ್ಪುತ್ತೆಯಲ್ಲಿ ಬಾಲಕೃಷ್ಣ ಪೂಜಾರಿ ಎಂಬವರನ್ನು ಅವರ ಪತ್ನಿ ಪ್ರತಿಮಾ ಮತ್ತು ಹೋಟೆಲ್‌ ಉದ್ಯಮಿಯ ಮಗ ದಿಲೀಪ್‌ ಹೆಗ್ಡೆ ಸೇರಿ ಕೊಲೆ ಮಾಡಿದ್ದರು. ಇದಕ್ಕೂ ಮೊದಲು ಪ್ರತಿಮಾ ಗಂಡನಿಗೆ ಸ್ಲೋ ಪಾಯ್ಸನ್‌ ಹಾಕಿ ಅನಾರೋಗ್ಯಕ್ಕೀಡಾಗುವಂತೆ ಮಾಡಿ ಸಾಯಿಸಲು ಯತ್ನಿಸಿದ್ದಳು. ಇದರಿಂದ ಬಾಲಕೃಷ್ಣ ಪೂಜಾರಿ ಚೇತರಿಸಿಕೊಂಡ ಬಳಿಕ ದಿಲೀಪ್‌ ಜೊತೆ ಸೇರಿ ಮನೆಯಲ್ಲಿ ಉಸಿರುಕಟ್ಟಿಸಿ ಕೊಂದಿದ್ದಳು. ರೀಲ್ಸ್‌ ಹುಚ್ಚು ಇದ್ದ ಪ್ರತಿಮಾಳಿಗೆ ದಿಲೀಪ್ ಸೋಷಿಯಲ್‌ ಮೀಡಿಯಾದಲ್ಲಿ ಪರಿಚಿತನಾಗಿ ಬಳಿಕ ಅವರ ನಡುವೆ ಸಂಬಂಧ ಬೆಳೆದಿತ್ತು. ಇದಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಸಾಯಿಸಲು ಆಕೆ ದಿಲೀಪ್‌ ಜೊತೆ ಸೇರಿ ಸಂಚು ಮಾಡಿದ್ದಳು. ಪೊಲೀಸರು ಅ.ನ 25ರಂದು ಇಬ್ಬರನ್ನು ಬಂಧಿಸಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಸುದ್ದಿ ಮಾಡಿತ್ತು.





























































































































error: Content is protected !!
Scroll to Top