ಅಜೆಕಾರು: ಬೈಕ್‌ ಡಿಕ್ಕಿ ಹೊಡೆದು ಮಹಿಳೆಗೆ ಗಂಭೀರ ಗಾಯ

ಅಜೆಕಾರು : ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬೈಕ್‌ ಡಿಕ್ಕಿ ಹೊಡೆದು ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಫೆ.27ರಂದು ಸಂಜೆ 7.15ರ ವೇಳೆಗೆ ಅಜೆಕಾರು ಕೈಕಂಬ ಜಂಕ್ಷನ್‌ ಬಳಿ ಸಂಭವಿಸಿದೆ. ಮರ್ಣೆ ಗ್ರಾಮದ ಜಯಲಕ್ಷ್ಮೀ ಗಾಯಗೊಂಡ ಮಹಿಳೆ. ಅಜೆಕಾರು ಪೇಟೆ ಕಡೆಯಿಂದ ಬಂದ ಬೈಕ್‌ ಹಿಂದಿನಿಂದ ಮಹಿಳೆಗೆ ಡಿಕ್ಕಿ ಹೊಡೆದಿದ್ದು, ಜಯಲಕ್ಷ್ಮಿ ಅವರನ್ನು ಕಾರ್ಕಳದ ಟಿಎಂಎ ಪೈ ಆಸ್ಪತ್ರೆಗೆ ಒಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದೆ. ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





























































































































error: Content is protected !!
Scroll to Top