ನಾಡ್ಪಾಲು : ದೇವಸ್ಥಾನದ ಹಣಕಾಸಿನ ವಿಚಾರದಲ್ಲಿ ಹೊಡೆದಾಟ

ಹೆಬ್ರಿ : ನಾಡ್ಪಾಲು ಗ್ರಾಮದ ನಂದಲ ದುರ್ಗಾಪರಮೇಶ್ವರಿ ದೇವಸ್ಥಾನ ಹಣಕಾಸಿನ ಲೆಕ್ಕಾಚಾರದ ವಿವಾದದ ಹಿನ್ನೆಲೆಯಲ್ಲಿ ಎರಡು ತಂಡಗಳು ಹೊಡೆದಾಡಿಕೊಂಡ ಘಟನೆ ಫೆ. 21ರಂದು ಸಂಭವಿಸಿದೆ. ಫೆ. 20ರಂದು ದೇವಸ್ಥಾನದ ವಾರ್ಷಿಕ ಜಾತ್ರೆ ನೆರವೇರಿದೆ. ಫೆ.21ರಂದು ಬೆಳಗ್ಗೆ 7.15ಕ್ಕೆ ದೇವಸ್ಥಾನದ ಹಣದ ಲೆಕ್ಕಾಚಾರದ ವಿಷಯದಲ್ಲಿ ಆನುವಂಶಿಕ ಆಡಳಿತ ವರ್ಗದವರಾದ ಮನೋರಮಾ, ಅವರ ಗಂಡ ಶೇಖರ, ಮಗ ಪ್ರವೀಣ್‌ ಕುಮಾರ್‌ ಹಾಗೂ ಅನಿಲ್‌ ಎಂಬವರ ತಂಡ ಮತ್ತು ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಯ ಸುಪರ್ದಿಗೆ ನೀಡಲು ಅರ್ಜಿ ಸಲ್ಲಿಸಿರುವ ವಿಜಯ್‌, ರಾಘವೇಂದ್ರ, ಸುದರ್ಶನ್‌, ಉಮೇಶ, ಶ್ರೀನಿವಾಸ ಹಾಗೂ ನಾಗರಾಜ ಮತ್ತಿತರರು ಹೊಡೆದಾಡಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.





























































































































error: Content is protected !!
Scroll to Top