ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪದವಿ ಪೂರ್ವ (ಪಿಯು) ಕಾಲೇಜುಗಳ ಪ್ರಾಂಶುಪಾಲರನ್ನು ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳನ್ನಾಗಿ (ಸಿಎಮ್ಪಿಒ) ನೇಮಕಗೊಳಿಸಿದೆ. ಅವರ ಕಾಲೇಜಿನಲ್ಲಿ ಓದುತ್ತಿರುವ ಯಾವುದೇ ಹೆಣ್ಣು ಮಗು 18 ವರ್ಷಕ್ಕಿಂತ ಮೊದಲು ಮದುವೆಯಾಗುವುದನ್ನು ತಡೆಯುವುದು ಅವರ ಜವಾಬ್ದಾರಿಯಾಗಿದೆ.
ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ, ಕಂದಾಯ ಅಧಿಕಾರಿ, ಬ್ಲಾಕ್ ಶಿಕ್ಷಣ ಅಧಿಕಾರಿ, ರಕ್ಷಣಾ ಅಧಿಕಾರಿ, ತಹಶೀಲ್ದಾರ್, ಪಂಚಾಯತ್ ಸದಸ್ಯರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಸರ್ಕಾರವು ಈ ಹಿಂದೆ ಸಿಎಂಪಿಒಗಳಾಗಿ ನೇಮಿಸಿತ್ತು.
ಫೆ. 4 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧೀನ ಕಾರ್ಯದರ್ಶಿ ಹೊರಡಿಸಿದ ಸರ್ಕಾರಿ ಆದೇಶದಲ್ಲಿ ಪಿಯು ಕಾಲೇಜುಗಳ ಪ್ರಾಂಶುಪಾಲರು, ನಿರ್ದೇಶಕರು, ಮಕ್ಕಳ ರಕ್ಷಣಾ ನಿರ್ದೇಶನಾಲಯ ಮತ್ತು ಮಕ್ಕಳ ಸಹಾಯವಾಣಿಗಳೊಂದಿಗೆ ಕೆಲಸ ಮಾಡುವ ಎಲ್ಲಾ ಜಿಲ್ಲಾ ಸಂಯೋಜಕರು ಸೇರಿದ್ದಾರೆ.
ಇಲಾಖೆಯ ಹಿಂದಿನ ಆದೇಶದ ಪ್ರಕಾರ, ಬಾಲ್ಯ ವಿವಾಹ ನಿಷೇಧ ಕಾಯ್ದೆಯ (ಸಿಎಮ್ಪಿಎ) ನಿಬಂಧನೆಗಳು ಮತ್ತು ಬಾಲ್ಯ ವಿವಾಹದ ಹಾನಿಕಾರಕ ಪರಿಣಾಮಗಳ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ಸಿಎಮ್ಪಿಎ ಕರ್ತವ್ಯವಾಗಿದೆ. ಜೊತೆಗೆ ಬಾಲ್ಯ ವಿವಾಹಗಳನ್ನು ತಡೆಯಬೇಕು ಎಂದು ಅದು ತಿಳಿಸಿದೆ. ರಾಜ್ಯದಲ್ಲಿ 30,000 ಕ್ಕೂ ಹೆಚ್ಚು ಸಿಎಮ್ಪಿಓ ಗಳಿದ್ದು, ಪಿಯು ಕಾಲೇಜು ಪ್ರಾಂಶುಪಾಲರು ಮತ್ತು ಇತರರನ್ನು ಸೇರಿಸಿಕೊಂಡರೆ ಅವರ ಸಂಖ್ಯೆ ಹೆಚ್ಚಾಗುತ್ತದೆ.































































