ಸ್ಕ್ಯಾಮ್‌ ಗ್ರೇಸ್‌ ಸರಕಾರದ ನೂರಾರು ಲೂಟಿ ಮಾರ್ಗಗಳು : ಜೆಡಿಎಸ್‌ ಲೇವಡಿ

ಬೆಂಗಳೂರು : ಅಬಕಾರಿ ಆದಾಯ ಹೆಚ್ಚಿಸಲು ಅಡ್ಡದಾರಿ ಹಿಡಿದಿರುವ ಸರ್ಕಾರದ ಕ್ರಮವನ್ನು ಜೆಡಿಎಸ್ ತೀಕ್ಷ್ಣವಾಗಿ ಟೀಕಿಸಿದ್ದು, ಸ್ಕ್ಯಾಮ್ ಗ್ರೇಸ್ ಸರ್ಕಾರದ ಲೂಟಿ ಮಾರ್ಗಗಳು ನೂರಾರು ಎಂದು ಲೇವಡಿ ಮಾಡಿದೆ.
ಸ್ಕ್ಯಾಮ್ ಗ್ರೇಸ್ ಸರ್ಕಾರದ ಲೂಟಿ ಮಾರ್ಗಗಳು ನೂರಾರು. ರಾಜ್ಯವನ್ನು ದಿವಾಳಿ ಎಬ್ಬಿಸಿರುವ ಬರಗೆಟ್ಟ ಕಾಂಗ್ರೆಸ್ ಸರ್ಕಾರ ಆದಾಯ ಹೆಚ್ಚಿಸಿಕೊಳ್ಳಲು ಇನ್ನಿಲ್ಲದ ಕುತಂತ್ರ ನಡೆಸುತ್ತಿದೆ. ಅಸ್ತಿತ್ವದಲ್ಲೇ ಇಲ್ಲದ ಪರವಾನಿಗೆಗಳ ಮಾರಾಟಕ್ಕೆ ಅಬಕಾರಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದು, ಕಾನೂನು ಬಾಹಿರವಾಗಿ ಲೈಸೆನ್ಸ್ ನೀಡಿ ಸಾವಿರಾರು ಕೋಟಿ ದುಡ್ಡು ಹೊಡೆಯಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ.
ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ ದಂಧೆ, ಲೈಸೆನ್ಸ್ ನವೀಕರಣ, ಮಂತ್ಲಿ ಮನಿ ಹೆಸರಲ್ಲಿ ಕೋಟಿ ಕೋಟಿ ಹಣವನ್ನು ಅಧಿಕಾರಿಗಳಿಂದ ಸಚಿವರೇ ವಸೂಲಿ ಮಾಡುತ್ತಿದ್ದು, ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಕಾಂಗ್ರೆಸ್ ಸರ್ಕಾರದ ಮಾನ ಹರಾಜಾಗಿದೆ.
ದಿಲ್ಲಿಯಲ್ಲಿ ಎಎಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಬಹುಕೋಟಿ ಅಬಕಾರಿ ಹಗರಣ ಮೀರಿಸುವಂತೆ ಕರ್ನಾಟಕದಲ್ಲಿಯೂ ಸದ್ದಿಲ್ಲದೆ ಅಬಕಾರಿ ನಡೆಯುತ್ತಿದೆ ಎಂದು ಜೆಡಿಎಸ್ ಕಿಡಿಕಾರಿದೆ.





























































































































error: Content is protected !!
Scroll to Top