ಅಮೃತ ಭಾರತಿ : ವಾರ್ಷಿಕ ಪ್ರತಿಭಾ ಪುರಸ್ಕಾರ

ಹೆಬ್ರಿ : ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅಮೃತಭಾರತಿ ವಿದ್ಯಾಲಯದ ಪ್ರಾಥಮಿಕ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿತು.

ಅಕ್ಷರ ಇಲಾಖೆಯ ಹೆಬ್ರಿ ಸಿ.ಆರ್.ಪಿ. ರಾಘವೇಂದ್ರ ಮುದ್ರಾಡಿ ಮಾತನಾಡಿ, ಮಹಾಭಾರತದ ಅರ್ಜುನನಿಗೆ ಮರದಲ್ಲಿ ಕುಳಿತ ಹಕ್ಕಿಯ ಕಣ್ಣು ಹೇಗೆ ಕಾಣಿಸಿತು ಹಾಗೆಯೇ ಯಾವುದೇ ವಿಷಯದ ಮೇಲು ನಿರ್ದಿಷ್ಟವಾದ ಏಕಾಗ್ರತೆಯನ್ನು ಹೊಂದಿದಾಗ ಮಾತ್ರ ಕಲಿಕೆ ಸಾಧ್ಯವಾಗುತ್ತದೆ ಎಂದ ಅವರು ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಮತ್ತು ನಿಶ್ಚಿತ ಗುರಿಯಿದ್ದಾಗ ಮಾತ್ರ ಉತ್ತಮ ಭವಿಷ್ಯ ರೂಪಿಸಲು ಸಾಧ್ಯ ಎಂದು ಹೇಳಿದರು.
ಇದೇ ಸಂದರ್ಭ ಸಾಹಿತ್ಯ ಮತ್ತು ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಮೃತ ಭಾರತಿ ವಿದ್ಯಾಲಯ ಆಡಳಿತ ಮಂಡಳಿ ಅಧ್ಯಕ್ಷ ಶೈಲೇಶ್ ಕಿಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಮುಖ್ಯ ಶಿಕ್ಷಕರಾದ ಅಪರ್ಣ ಹಾಗೂ ಶಕುಂತಲಾ ಉಪಸ್ಥಿತರಿದ್ದರು. ಪ್ರತಿಮಾ ಸ್ವಾಗತಿಸಿ, ಪ್ರೇಮಲತಾ ವಂದಿಸಿದರು. ಮೀನಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

























































































































error: Content is protected !!
Scroll to Top