ಹೆಬ್ರಿ : ವಿದ್ಯಾನಗರ ಫ್ರೆಂಡ್ಸ್ ಬಲ್ಲಾಡಿ ಮುದ್ರಾಡಿ ಇವರ ಆಶ್ರಯದಲ್ಲಿ ರಾಜ್ಯ ಮಟ್ಟದ ಕ್ರೀಡಾಪಟು ದಿವಂಗತ ಸುಶಾಂತ್ ಶೆಟ್ಟಿ ಸ್ಮರಣಾರ್ಥ
ಫೆ. 16ರಂದು ಬಲ್ಲಾಡಿಯಲ್ಲಿ ನಡೆದ ಸುಶಾಂತ್ ಟ್ರೋಫಿ ಕ್ರಿಕೆಟ್ ಪಂದ್ಯಾಟದಲ್ಲಿ ಹೆಬ್ರಿ ಬೀಡು ಫ್ರೆಂಡ್ಸ್ ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಸ್ಥಾನವನ್ನು ಅಂಡಾರು ಫ್ರೆಂಡ್ಸ್ ತಂಡ ತಮ್ಮದಾಗಿಸಿಕೊಂಡಿತು.
ಬೀಡು ತಂಡದ ಸುದೀಪ್ ಪಂದ್ಯ ಕೂಟ ಶ್ರೇಷ್ಠ ಆಟಗಾರ, ಸುಶಾಂತ್ ಬೆಸ್ಟ್ ಫೀಲ್ಡರ್, ಸುಧಾಕರ್ ಬೆಸ್ಟ್ ಕೀಪರ್ ಹಾಗೂ ಸಜಿತ್ ಬೆಸ್ಟ್ ಬೌಲರ್ ಪ್ರಶಸ್ತಿ ಪಡೆದುಕೊಂಡರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ವಿ. ಸುನಿಲ್ ಕುಮಾರ್, ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ ಪೂಜಾರಿ, ಸದಸ್ಯ ಗಣಪತಿ ಎಂ., ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.) ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್, ಮುದ್ರಾಡಿಯ ಗುರುರಕ್ಷಾ ಸೌಹಾರ್ದ ಸಹಕಾರಿ ಸೊಸೈಟಿ ಅಧ್ಯಕ್ಷ ಮಂಜುನಾಥ್ ಪೂಜಾರಿ ಉಪಸ್ಥಿತರಿದ್ದರು. ಸೂರಜ್ ಶೆಟ್ಟಿ ಸ್ವಾಗತಿಸಿದರು. ಗಗನ್ ಸೂರಿಮಣ್ಣು ಕಾರ್ಯಕ್ರಮ ನಿರೂಪಿಸಿ, ಸುದೀಪ್ ಶೆಟ್ಟಿ ವಂದಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮುದ್ರಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಂಜುನಾಥ್ ಹೆಗ್ಡೆ, ಉದ್ಯಮಿ ಹರೀಶ್ ಶೆಟ್ಟಿ ಪಡುಕುಡೂರು, ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್, ಉದ್ಯಮಿಗಳಾದ ಶರತ್ ಶೆಟ್ಟಿ ಬಲ್ಲಾಡಿ, ಸನ್ಮಿತ್ ಶೆಟ್ಟಿ, ಶರಣ್ಯ ಶೆಟ್ಟಿ, ಸುರೇಶ್ ಸೂರಿಮಣ್ಣು, ಕ್ರೀಡಾಪಟು ಪ್ರವೀಣ್ ಶೆಟ್ಟಿ, ಸೂರಜ್ ಶೆಟ್ಟಿ ಬಲ್ಲಾಡಿ, ಸಂದೀಪ್ ಶೆಟ್ಟಿ ಪಾಲ್ಗೊಂಡು ವಿಜೇತರಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಕ್ರೀಡಾಕೂಟಕ್ಕೆ ಸಹಕಾರ ನೀಡಿದ ಉದ್ಯಮಿ ಸನ್ಮಿತ್ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು. ಮುದ್ರಾಡಿ ಪ್ರಶಾಂತ್ ಪೈ ಕಾರ್ಯಕ್ರಮ ನಿರೂಪಿಸಿ, ಪ್ರಶಾಂತ್ ಪೂಜಾರಿ ಬಲ್ಲಾಡಿ ವಂದಿಸಿದರು.































































