ಕಾರ್ಕಳ : ಆನೆಕೆರೆ ಬಳಿ ಖಾಸಗಿ ಬಸ್ಸೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಜ. 26ರ ಮಧ್ಯಾಹ್ನ ಸಂಭವಿಸಿದೆ. ಕಾರ್ಕಳದಿಂದ ಉಡುಪಿಗೆ ಸಾಗುತ್ತಿದ್ದ ಬಸ್ ಸ್ಕೂಟಿಗೆ ಡಿಕ್ಕಿಯಾಗಿದ್ದು ಸವಾರ ಮಿಯ್ಯಾರು ಮೂಲದ ಅಜಮತ್ತುಲ್ಲಾ (50) ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುವನ್ನು ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಆನೆಕೆರೆಯಲ್ಲಿ ಸ್ಕೂಟಿಗೆ ಬಸ್ ಡಿಕ್ಕಿ – ಸವಾರ ಮೃತ್ಯು
































































