ಕುಂದಾಪುರದ ಅರಾಟೆಯಲ್ಲಿ ಅಪಘಾತ – ಬಾರಾಡಿ ಮೂಲದ ವ್ಯಕ್ತಿ ಸಾವು

ಕಾರ್ಕಳ : ಕುಂದಾಪುರದ ಅರಾಟೆ ಹೊಸ ಸೇತುವೆ ಬಳಿ ಬೈಕ್ ಗೆ ಟಾಟಾ ಏಸ್ ವಾಹನ ಢಿಕ್ಕಿಯಾಗಿ ಬೈಕ್ ಸವಾರ ಬಾರಾಡಿ ಮೂಲದ ರಂಜಿತ್ ಬಳ್ಳಾಲ್ (59) ಸ್ಥಳದಲ್ಲೇ ಸಾವನಪ್ಪಿರುವ ದಾರುಣ ಘಟನೆ ಡಿ. 9 ರಂದು ಸಂಭವಿಸಿದೆ.

ಅರಾಟೆಯಲ್ಲಿ ಹಳೆ ಸೇತುವೆಯಲ್ಲಿ ಸಂಚಾರ ನಿರ್ಬಂಧವಿದ್ದು, ಹೊಸ ಸೇತುವೆಯಲ್ಲಿಯೇ ಎರಡೂ ಕಡೆ ವಾಹನ ಸಂಚಾರ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಮೃತರು ಪತ್ನಿ, ತಂದೆ, ತಾಯಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ರಂಜಿತ್ ಅವರು ಬೆಂಗಳೂರಿನಲ್ಲಿ ವಾಸವಾಗಿದ್ದು , ಬೈಕ್,‌ ಕಾರು ರ್ಯಾಲಿಯ ಹವ್ಯಾಸ ಹೊಂದಿದ್ದರು.





























































































































error: Content is protected !!
Scroll to Top