ನ. 11 ಕಾರ್ಕಳ, ನ. 15 ಹೆಬ್ರಿಯಲ್ಲಿ ಪೌತಿ ಆಂದೋಲನ

ಉಡುಪಿ : ಕಾರ್ಕಳ ತಾಲೂಕಿನಲ್ಲಿ ನ. 11ರಂದು ಹಾಗೂ ಹೆಬ್ರಿ ತಾಲೂಕಿನಲ್ಲಿ ನ. 15 ರಂದು ಆಯಾಯ ತಾಲೂಕು ಕಚೇರಿ ಸಭಾಂಗಣದಲ್ಲಿ ಪೌತಿ ಅಥವಾ ವಾರೀಸು ಖಾತೆ ಆಂದೋಲನ ನಡೆಯಲಿದೆ.

ಜಿಲ್ಲೆಯಲ್ಲಿ ಪಹಣಿ ಆಧಾರ್ ಜೋಡಣೆ ಕಾರ್ಯವು ಪ್ರಗತಿಯಲ್ಲಿದ್ದು ಈ ಪ್ರಕ್ರಿಯೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಖಾತಾದಾರರು ಮರಣ ಹೊಂದಿರುವ ಕುರಿತು ತಂತ್ರಾಂಶದಲ್ಲಿ ನಮೂದಿಸಿರುತ್ತಾರೆ. ಇಂತಹ ಪ್ರಕರಣಗಳಲ್ಲಿ ಪೌತಿ ಅಥವಾ ವಾರೀಸು ಖಾತೆ ಆಂದೋಲನವನ್ನುಪೌತಿ/ ವಾರೀಸು ಖಾತೆ ಮಾಡಲು ಬಾಕಿ ಇರುವ ಜಮೀನಿನ ವಾರೀಸುದಾರರು ಆಯಾಯ ತಾಲೂಕು ಕಚೇರಿ ಅಥವಾ ತಮ್ಮ ಗ್ರಾಮದ ಗ್ರಾಮ ಆಡಳಿತ ಅಧಿಕಾರಿಗಳನ್ನ ಸಂಪರ್ಕಿಸಿ ಮಾಹಿತಿಯನ್ನು ಪಡೆದು, ಸೂಕ್ತ ದಾಖಲಾತಿಗಳೊಂದಿಗೆ ಪೌತಿ ಆಂದೋಲನದಲ್ಲಿ ಭಾಗವಹಿಸುವಂತೆ ಹಾಗೂ ಈ ಪೌತಿ ಆಂದೋಲನದಡಿ ಜಮೀನಿನ ದಾಖಲೆಗಳನ್ನು ಪಹಣಿಯಲ್ಲಿ ಇಂಧೀಕರಿಸಲು ಕ್ರಮ ಕೈಗೊಳ್ಳುಲಾಗುವುದು. ಸಾರ್ವಜನಿಕರು ಆಂದೋಲನದ ಸದಪಯೋಗವನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.





























































































































error: Content is protected !!
Scroll to Top