ಬೈಕ್‌ಗಳ ಡಿಕ್ಕಿ – ಹಿಂಬದಿ ಸವಾರೆ ಆಸ್ಪತ್ರೆ ದಾಖಲು

ಕಾರ್ಕಳ : ಬೈಕ್‌ಗಳ ನಡುವೆ ಡಿಕ್ಕಿಯಾಗಿ ಹಿಂಬದಿ ಸವಾರೆ ಆಸ್ಪತ್ರೆ ದಾಖಲಾದ ಘಟನೆ ಸೆ. 18ರಂದು ಬೈಲೂರಿನಲ್ಲಿ ಸಂಭವಿಸಿದೆ.
ಬೈಲೂರಿನ ಅಶ್ವಥ್‌ ನಾರಾಯಣ ಎಂಬವರು ತಮ್ಮ ದ್ವಿಚಕ್ರ ವಾಹನದಲ್ಲಿ ವೀಣಾ ಎಂಬುವವರನ್ನು ಹಿಂಬದಿ ಸವಾರಳನ್ನಾಗಿ ಕುಳ್ಳಿರಿಸಿಕೊಂಡು ಬೈಲೂರಿನಿಂದ ಮೈಂದೊಟ್ಟು ಕಡೆಗೆ ಹೋಗಲು ಮೈಂದೊಟ್ಟು ಎಂಬಲ್ಲಿ ರಸ್ತೆಗೆ ಪ್ರವೇಶಿಸುವಾಗ ನರೇಶ ಎಂಬವರು ಬೈಕ್‌ನ್ನು ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವಾಗ ಅಶ್ವಥನಾರಾಯಣ ಅವರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮವಾಗಿ ಬೈಕ್‌ ಸಮೇತ ಅಶ್ವಥ ನಾರಾಯಣ ಮತ್ತು ವೀಣಾ ಅವರು ರಸ್ತೆಗೆ ಬಿದ್ದಿರುತ್ತಾರೆ. ವೀಣಾ ಅವರು ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದು, ತಕ್ಷಣವೆ ಅವರನ್ನು ಚಿಕಿತ್ಸೆಗಾಗಿ ಬೈಲೂರಿನ ಗುರುಕೃಪ ಕ್ಲೀನಿಕ್‌ಗೆ ಕರೆದೊಯ್ಯಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಮ್‌.ಸಿ. ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

















































error: Content is protected !!
Scroll to Top