ಸಾಹಿತ್ಯದ ಓದಿನಿಂದ ವಿಕಸನದ ಸಿದ್ಧಿ – ರಾಜೇಂದ್ರ ಭಟ್ ಕೆ.

ಕಾರ್ಕಳ : ಸಾಹಿತ್ಯದ ಓದಿನಿಂದ ನಮ್ಮ ಭಾಷೆ ಶುದ್ಧವಾಗುವುದು. ಸಂವಹನ ಸುಲಭವಾಗುವುದು. ಅಕಾಡೆಮಿಕ್ ಕಲಿಕೆಯು ವೇಗ ಪಡೆದು, ವ್ಯಕ್ತತ್ವ ವಿಕಸನ, ಮೌಲ್ಯಗಳು ಅಂತರ್ಗತವಾಗುವುದು ಎಂದು ವಿಕಸನದ ರಾಷ್ಟ್ರೀಯ ತರಬೇತಿದಾರ, ಶಿಕ್ಷಕ ರಾಜೇಂದ್ರ ಭಟ್‌ ಹೇಳಿದರು.
ಅವರು ಕಾರ್ಕಳ ಎಸ್ ವಿ ಟಿ ಮಹಿಳಾ ಪದವಿ ಕಾಲೇಜಿನ ಸಾಹಿತ್ಯ ಸಂಘ ಉದ್ಘಾಟಿಸಿ, ವಿದ್ಯಾರ್ಥಿನಿಯರ ಜೊತೆಗೆ ‘ಸಾಹಿತ್ಯದ ವಿವಿಧ ಆಯಾಮಗಳು’ ಎಂಬ ವಿಷಯದ ಮೇಲೆ ನಡೆದ ಸಂವಾದದಲ್ಲಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲೆ ಉಷಾ ನಾಯಕ್ ಅಧ್ಯಕ್ಷತೆ ವಹಿಸಿ, ಬದುಕಿಗೆ ಅರ್ಥ ನೀಡುವ ಸಾಹಿತ್ಯದ ಓದು ಇಂದಿನ ಅಗತ್ಯ ಎಂದರು. ವಿದ್ಯಾರ್ಥಿ ನಾಯಕರಾದ ಶ್ರೇಯಾ ಮತ್ತು ರಕ್ಷಾ ವೇದಿಕೆಯಲ್ಲಿದ್ದರು.
ಸಾಹಿತ್ಯ ಸಂಘದ ನಿರ್ದೇಶಕಿ ವಿನುತಾ ಕಾಮತ್ ಸ್ವಾಗತಿಸಿ, ಮಂಜುಳಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

















































error: Content is protected !!
Scroll to Top