ಸುರತ್ಕಲ್‌ : ಚಲಿಸುತ್ತಿರುವಾಗಲೇ ಬೆಂಕಿಗಾಹುತಿಯಾದ ಬಿಎಂಡಬ್ಲ್ಯು ಕಾರು

ಮಂಗಳೂರು : ಮಂಗಳೂರು-ಉಡುಪಿ ರಾಷ್ಟ್ರಿಯ ಹೆದ್ದಾರಿಯಲ್ಲಿ ಸುರತ್ಕಲ್ ಎನ್‌ಐಟಿಕೆ ಹಳೆ ಟೋಲ್‌ಗೇಟ್ ಬಳಿ ಇಂದು ಬೆಳಗ್ಗೆ ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರೊಂದು ಬೆಂಕಿ ಹತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ.
ಕಾರು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದಾಗ ಟನ್‌ಐಟಿಕೆ ಟೋಲ್‌ಗೇಟ್‌ ಸಮೀಪಿಸುತ್ತಿರುವಾಗ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಅವಘಡದಲ್ಲಿ ಸಾವುನೋವು ಸಂಭವಿಸಿಲ್ಲ. ಚಾಲಕ ಪಾರಾಗಿದ್ದಾರೆ.
ಮಂಗಳೂರು ಉತ್ತರ ಸಂಚಾರ ಪೊಲೀಸರು, ಸುರತ್ಕಲ್ ಠಾಣೆಯ ಪೊಲಿಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಗ್ನಿಶಾಮಕ ದಳಕ್ಕೆ ಸಾರ್ವಜನಿಕರು ಮಾಹಿತಿ ನೀಡಿದ ಬಳಿಕ ಬಂದು ಬೆಂಕಿ ನಂದಿಸಿದ್ದಾರೆ. ಕಾರು ಸಂಪೂರ್ಣವಾಗಿ ಸುಟ್ಟುಹೋಗಿದೆ.





























































































































error: Content is protected !!
Scroll to Top