ಕಾರ್ಕಳ : ನೂರಾಳ್ ಬೆಟ್ಟು ಗ್ರಾಮದ ಪುಂಜಾಜೆ ಎಂಬಲ್ಲಿ ಜಯಣ್ಣ ಎಂಬವರ ಜಾಗದಲ್ಲಿರುವ ಶೆಡ್ಡಿನಲ್ಲಿ ವಾಸವಿರುವ ಸುಂದರಮ್ಮ ಅವರ ಗಂಡ ಬಾಳಪ್ಪ (56) ಅವರು ವಿಪರೀತ ಮದ್ಯಸೇವಿಸುವ ಚಟವುಳ್ಳವರಾಗಿದ್ದು ಮದ್ಯಪಾನ ಮಾಡಿ ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ಸೆ.2ರಂದು ಮದ್ಯಪಾನ ಮಾಡಿ ಮನೆಯಲ್ಲಿ ಗಲಾಟೆ ಮಾಡಿ ಬಳಿಕ ರಾತ್ರಿ ಸಮಯ ಮನೆಯ ಹತ್ತಿರದ ಶೆಡ್ಡಿನಲ್ಲಿ ಮಲಗಿದ್ದು, ಸೆ. 3ರಂದು ಬೆಳಗ್ಗೆ 6 ಗಂಟೆಗೆ ವಾಪಾಸು ಮನೆಗೆ ಬಂದು ಮತ್ತೆ ಶೆಡ್ಡಿಗೆ ಹೋಗಿದವರು, ಬೆಳಗ್ಗೆ 8 ಗಂಟೆಯ ಮಧ್ಯೆ ಶೆಡ್ಡಿನ ಮಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೂರಾಳ್ ಬೆಟ್ಟು : ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

































