ಹೆಬ್ರಿ : ಜಾರ್ಖಂಡ್‌ ಮೂಲದ ಗರ್ಭಿಣಿ ಮಹಿಳೆ ಆತ್ಮಹತ್ಯೆ

ಹೆಬ್ರಿ : ಜಾರ್ಖಂಡ್‌ ಮೂಲದ ಕಾರ್ಮಿಕ ಗರ್ಭಿಣಿ ಮಹಿಳೆ ನೇಣು ಬಿಗದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿ ಗ್ರಾಮದ ಬಚ್ಚಪ್ಪು ನೆಕ್ಕರ್ಕೆ ಎಂಬಲ್ಲಿ ಸಂಭವಿಸಿದೆ. ಜಾರ್ಖಂಡ್‌ ಲೊರದಗ ಜಿಲ್ಲೆಯ ಪ್ರಿಯಾಂಕ ಒರಾನ್‌(24) ನೇಣಿಗೆ ಶರಣಾದವರು. ಇವರಿಗೆ ಬಿಪಿನ್‌ ಒರಾನ್‌ನೊಂದಿಗೆ ಒಂದು ವರ್ಷದ ಹಿಂದೆ ಮದುವೆಯಾಗಿದ್ದು, ಕಳೆದ 2 ತಿಂಗಳುಗಳಿಂದ ತನ್ನ ಗಂಡನೊಂದಿಗೆ ನೆಕ್ಕರ್ಕೆಯ ಆ್ಯಂಟೋನಿ ಕೆ.ಎ. ಎಂಬವರ ತೋಟದ ಮನೆಯಲ್ಲಿ ವಾಸವಿದ್ದರು. ಕಳೆದ ಒಂದು ವಾರದಿಂದ ಮಂಕಾಗಿದ್ದು ಸೆ. 2ರ ರಾತ್ರಿ 9 ಗಂಟೆಯಿಂದ ಸೆ. 3ರ ಬೆಳಗಿನ ಜಾವ 2.30ರ ಮಧ್ಯಾವಧಿಯಲ್ಲಿ ಯಾವುದೋ ವೈಯಕ್ತಿಕ ಕಾರಣದಿಂದ ಅಥವಾ ಇನ್ನಾವುದೋ ಕಾರಣದಿಂದ ಮಾನಸಿಕವಾಗಿ ನೊಂದು ಜೀವನದಲ್ಲಿ ಜೀಗುಪ್ಸೆಗೊಂಡು ತಾನು ಕೆಲಸ ಮಾಡಿಕೊಂಡಿರುವ ತೋಟದ ಮನೆಯ ಪಕ್ಕದಲ್ಲಿರುವ ಶೆಡ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಮೃತರ ಮರಣದ ಕಾರಣದ ಬಗ್ಗೆ ಸ್ಪಷ್ಟತೆ ಇಲ್ಲದೆ ಇರುವುದರಿಂದ ಮರಣದ ಕಾರಣ ಬಗ್ಗೆ ಸಂಶಯವಿರುವುದಾಗಿದೆ ಎಂದು ದೂರಿನಲ್ಲಿ ದಾಖಲಾಗಿದೆ.





























































































error: Content is protected !!
Scroll to Top