ಕಾರ್ಕಳ : ಸಾಗರ್ ರತ್ನ ರೆಸ್ಟೋರೆಂಟ್ ಪ್ರೈವೇಟ್ ಲಿ. ವತಿಯಿಂದ ಕಾರ್ಕಳ ಬೈಪಾಸ್ ರಸ್ತೆಯ ಪುಲ್ಕೇರಿ ಎಂಬಲ್ಲಿ ನಿರ್ಮಿಸಿರುವ ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್ ಸಾಗರ್ ಎಕ್ಸ್‌ಪ್ರೆಸ್ ಸೆ. 4ರ ಬುಧವಾರ ಶುಭಾರಂಭಗೊಳ್ಳಲಿದೆ.
ಖ್ಯಾತ ಹೊಟೇಲ್ ಉದ್ಯಮಿ ಮೂಲತಃ ಕಾರ್ಕಳದವರೇ ಆಗಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಯರಾಮ್ ಬನಾನ್ ಅವರು ಬೋರ್ಕಟ್ಟೆ ಹೆಗ್ಡೆ ಕುಟುಂಬಸ್ಥರ ಪಾಲುದಾರಿಕೆಯೊಂದಿಗೆ ತನ್ನೂರಿನವರಿಗಾಗಿ ಸಕಲ ಸೌಕರ್ಯವಿರುವ ಉತ್ತಮ ಗುಣಮಟ್ಟದ ಶುಚಿ ರುಚಿಯಾದ ಊಟೋಪಚಾರ ಒದಗಿಸಿಕೊಡಬೇಕಂಬ ನಿಟ್ಟಿನಲ್ಲಿ ಸಾಗರ್ ಎಕ್ಸ್‌ಪ್ರೆಸ್ ತೆರೆದಿರುತ್ತಾರೆ.
ಸಾಗರ್ ರತ್ನದಲ್ಲಿ ಸುಸಜ್ಜಿತ, ಆಹ್ಲಾದಕರ ವಾತಾವರಣದೊಂದಿಗೆ ಸೌತ್ ಇಂಡಿಯನ್, ನಾರ್ತ್ ಇಂಡಿಯನ್, ಚೈನೀಸ್, ಚಾಟ್, ಪ್ಯಾಂಟ್ರಿ ಐಟಂಗಳಿವೆ. ಹುಟ್ಟು ಹಬ್ಬ ಆಚರಣೆ ಇನ್ನಿತರ ಕಾರ್ಯಗಳಿಗೆ ವಿಶೇಷವಾದ ವ್ಯವಸ್ಥೆ ಕಲ್ಪಿಸಲಾಗಿದೆ. ಹೊಟೇಲ್ ಬಳಿ ಬೇಕರಿ, ಸ್ವೀಟ್ಸ್ & ಶೇವರಿಸ್ ಶಾಪ್ ಇದೆ. ಔಟ್ ಡೋರ್ ಕೆಟರಿಂಗ್ ವ್ಯವಸ್ಥೆ, ಕಾರ್ಕಳ ನಗರದೊಳಗಡೆ ಉಚಿತ ಡೆಲಿವರಿಯನ್ನೂ ಮಾಡಲಾಗುವುದು. ಗ್ರಾಹಕರ ಅನುಕೂಲಕ್ಕಾಗಿ
ಚಿಕ್ಕ ಮಕ್ಕಳ ಆಟದ ಪ್ರದೇಶ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಪ್ರತ್ಯೇಕ ವಾಶ್ ರೂಂ ಲಭ್ಯವಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಸಂಪರ್ಕ ಸಂಖ್ಯೆ : 8800292211.
Location ಗಾಗಿ ಕ್ಲಿಕ್ ಮಾಡಿ
























