ಕಾರ್ಕಳ: ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೃಷ್ಣವೇಷ ಸ್ಪರ್ಧೆ ನಡೆಯಿತು. ಮಾಳ ಗ್ರಾಮ ವ್ಯಾಪ್ತಿಯ 2ರಿಂದ 10 ವರ್ಷದೊಳಗಿನ ಸುಮಾರು 50 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತೀರ್ಪುಗಾರರಾಗಿ ಶ್ರೀರಂಗ ಜೋಶಿ, ಡಾ.ಸತ್ಯನಾರಾಯಣ ಭಟ್, ರಮಿತಾ ಶೈಲೇಂದ್ರ ರಾವ್ ಕಾರ್ಕಳ ಆಗಮಿಸಿದ್ದರು.
ಬಹುಮಾನ ವಿತರಣಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಗಜಾನನ ಮರಾಠೆ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಕಾರ್ಕಳದ ನಿವೃತ್ತ ಏರ್‌ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್, ಸಂಚಾಲಕ ಸುಧಾಕರ್ ಡೋಂಗ್ರೆ ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ವತಿಯಿಂದ ಸಿಹಿತಿಂಡಿ ವಿತರಣೆ
ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ಗುರುಕುಲ ಮಾಳ ಶಾಲಾ ಮಕ್ಕಳಿಗೆ ಸಿಹಿ ತಿಂಡಿಯನ್ನು ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ವತಿಯಿಂದ ನೀಡಲಾಯಿತು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಜ್ಯೋತಿ ರಮೇಶ್, ಕೋಶಾಧಿಕಾರಿ ಟಿ. ಕೆ. ರಘುವೀರ್, ಪದಾಧಿಕಾರಿಗಳಾದ ಪೂರ್ಣಿಮಾ ಶೆಣೈ ಮತ್ತು ನಿಹಾಲ್ ಶೆಟ್ಟಿ ಉಪಸ್ಥಿತರಿದ್ದರು.


ಫಲಿತಾಂಶ
0-2 ವರ್ಷ : ಪ್ರಥಮ- ರಿಯಾನ್ಶಿ ಸುಕೇಶ್ ಶೆಟ್ಟಿ, ದ್ವಿತೀಯ – ಕೃತಿಕ್ ಆಚಾರ್ಯ, ತೃತೀಯ- ಆವ್ಯುಕ್ತ್ ಹೆಗ್ಡೆ.
2-5 ವರ್ಷ : ಪ್ರಥಮ – ಕೃಷಾ, ದ್ವಿತೀಯ – ಅಂಶುಲ್, ತೃತೀಯ – ಸ್ಮೃತಿ ಎಸ್ ಸಾಲಿಯಾನ್
5-10 ವರ್ಷ: ಪ್ರಥಮ : ಅಪೇಕ್ಷಾ ಕಾಮತ್, ದ್ವಿತೀಯ – ಸಂಹಿತಾ ಮರಾಠೆ, ತೃತೀಯ – ನವತೇಜ್
ಭಾಗವಹಿಸಿದ ಎಲ್ಲಾ ಮುದ್ದುಕೃಷ್ಣರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು. ಸಹ ಶಿಕ್ಷಕಿ ರಕ್ಷಿತಾ ಕಾರ್ಯಕ್ರಮ ಸಂಯೋಜಿಸಿದರು. ಶಿಕ್ಷಕರು, ಪೋಷಕರು, ಆಡಳಿತ ಮಂಡಳಿಯ ಸದಸ್ಯರು, ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ ಶೆಣೈ ವಂದಿಸಿದರು.


































































