ಮರಳು ಅಕ್ರಮ ಸಾಗಾಟ – ದೂರು ದಾಖಲು

ಕಾರ್ಕಳ : ಆನಂದ ಎಂಬವರು ಮಂಗಳೂರಿನ ಅಡ್ಡೂರು ಎಂಬಲ್ಲಿ ಸರಕಾರಿ ಹೊಳೆಯಿಂದ ಶಫೀಕ್‌ ಅಡ್ಡೂರು ಮತ್ತು ಶರೀಫ್‌ ಹೊಸ್ಮಾರು ಕಳವು ಮಾಡಿ ನೀಡಿದ ಮರಳನ್ನು ಆ. 18ರಂದು ಮಧ್ಯಾಹ್ನ 2.30ಕ್ಕೆ KA-01-AF-6420ನೇ ನಂಬ್ರದ ಟಿಪ್ಪರ್‌ ಲಾರಿಯಲ್ಲಿ ಯಾವುದೇ ಪರವಾನಿಗೆಯಿಲ್ಲದೆ ನಿಯಮ ಉಲ್ಲಂಘಿಸಿ ಕುಕ್ಕುಂದೂರು ಗ್ರಾಮದ ಜಯಂತಿ ನಗರ ಸರ್ವಜ್ಞ ಸರ್ಕಲ್ ಬಳಿ ಪುಲ್ಕೇರಿ ಬೈಪಾಸ್ ಕಡೆಯಿಂದ ಜೋಡು ರಸ್ತೆಯ ಕಡೆಗೆ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































































error: Content is protected !!
Scroll to Top