ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ – 6 ಮಂದಿ ವಶಕ್ಕೆ

ಕಾರ್ಕಳ : ನಿಟ್ಟೆ ಗ್ರಾಮದ ಹುಣಸೆಕಟ್ಟೆಯಲ್ಲಿರುವ ಹಳೆಯ ಕ್ರಶರ್‌ ಬಳಿ ಆ. 18 ರಂದು ಮಧ್ಯಾಹ್ನ 1.45 ಗಂಟೆಗೆ ಸದಾನಂದ, ಗಣೇಶ್, ಪ್ರಥಮ್, ಜಯರಾಜ್, ಸೂರ್ಯ ಮತ್ತು ರಾಜ ಎಂಬವರು ಅಂದರ್-ಬಾಹರ್ ಎಂಬ ಜುಗಾರಿ ಆಟವನ್ನು ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೋಲೀಸ್ ಉಪನಿರೀಕ್ಷಕ ದಿಲೀಪ್ ಜಿ, ಆರ್. ದಾಳಿ ನಡೆಸಿ ಆರೋಪಿತರನ್ನು ವಶಕ್ಕೆ ಪಡೆದು ಇಸ್ಪೀಟು ಆಟಕ್ಕೆ ಬಳಸಿದ 10,200 ರೂ. ನಗದು, ಇಸ್ಪೀಟ್ ಎಲೆಗಳು, ನೆಲಕ್ಕೆ ಹಾಸಿದ 2 ಹಳೆಯ ಪ್ಲಾಸ್ಟಿಕ್ ಗೋಣಿ ಚೀಲ ಹಾಗೂ ದ್ವಿಚಕ್ರ ವಾಹನಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































































error: Content is protected !!
Scroll to Top