ಹೆಬ್ರಿ : ದೇಶ ಪ್ರೇಮ, ಧೈರ್ಯ, ಸಾಹಸ, ಕರ್ತವ್ಯ ನಿಷ್ಠೆಗೆ ಎಂ.ಡಿ. ಅಧಿಕಾರಿ ಓರ್ವ ಸಾಕ್ಷಿ. ದೇಹಕ್ಕೆ ಬೆಲೆ ನೀಡದೇ ದೇಶಕ್ಕೆ ಬೆಲೆ ಕೊಟ್ಟು ಮಹಾನ್ ವ್ಯಕ್ತಿ ಅಧಿಕಾರಿ ಎಂದು ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಹೇಳಿದರು.
ಅವರು ಆ. 15ರಂದು ಪಡುಕುಡೂರಿನಲ್ಲಿ ಪ್ರತಿಷ್ಠಾಪಿಸಲಾದ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ. ಅಧಿಕಾರಿ ಅವರ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.
ಎಂ.ಡಿ. ಅಧಿಕಾರಿಯವರ ಪುತ್ಥಳಿ ಲೋಕಾರ್ಪಣೆ ಮಾಡುವ ಅವಕಾಶ ನನಗೆ ದೊರೆತಿರುವುದು ನನ್ನ ಸೌಭಾಗ್ಯ. ಎಂ.ಡಿ. ಅಧಿಕಾರಿ ದಂಪತಿ ಪ್ರತಿಮೆ ಒಟ್ಟಿಗೆ ಪ್ರತಿಷ್ಠೆ ಆಗಬೇಕು ಎಂಬುದು ನನ್ನ ಆಶಯವಾಗಿತ್ತು. ಒಕ್ಕಲಿನಲ್ಲಿದ್ದ ಸರ್ವರಿಗೂ ಭೂಮಿ ನೀಡಿರುವ ಅಧಿಕಾರಿಯವರು ಮರೆಯಲಾರದ ಮರೆಯಬಾರದ ಶಕ್ತಿ. ಸ್ವಾತಂತ್ರ್ಯ ಹೋರಾಟಗಾರರಾಗಿ ಪಡುಕುಡೂರಿನ ಕೀರ್ತಿಯನ್ನು ಜಗದಗಲ ಪಸರಿಸಿ ವ್ಯಕ್ತಿ ಎಂದು ಮೊಯ್ಲಿ ಹೇಳಿದರು.
ಸಮಾರಂಭದಲ್ಲಿ ಮಾಜಿ ಯೋಧರು, ಪಡುಕುಡೂರು ಪರಿಸರದ ಶೈಕ್ಷಣಿಕ ಸಾಧಕರು ಹಾಗೂ ದಾನಿಗಳಿಗೆ ಸನ್ಮಾನ ಮಾಡಲಾಯಿತು.
ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಎಂ.ಡಿ. ಅಧಿಕಾರಿ ಪುತ್ರಿ ನಿವೃತ್ತ ಉಪನ್ಯಾಸಕಿ ಅಭಯಲಕ್ಷಿ, ಪ್ರತಿಮೆ ಪ್ರತಿಷ್ಠಾಪನೆಯ ರೂವಾರಿ ಪಡಕುಪರ್ಕಳ ಶಂಕರ ಶೆಟ್ಟಿ, ಪುತ್ಥಳಿ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಪಡುಕುಡೂರು ಪಟೇಲರ ಮನೆ ಜಗದೀಶ ಹೆಗ್ಡೆ, ಮಾಜಿ ಸಚಿವ ಅಭಯಚಂದ್ರ ಜೈನ್, ಉದಯ ಶೆಟ್ಟಿ ಮುನಿಯಾಲು, ಹಿರಿಯ ವಕೀಲ ಎಂ.ಕೆ. ವಿಜಯ ಕುಮಾರ್, ಡಾ. ಎಂ.ಎಸ್. ರಾವ್ ಮುದ್ರಾಡಿ, ಡಾ. ಜಯರಾಮ ಹೆಗ್ಡೆ ಪಡುಕುಡೂರು, ವರಂಗ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಅಮೀನ್, ಪಡುಕುಡೂರು ದೇವಸ್ಥಾನದ ಆಡಳಿತ ಮೋಕ್ತೇಸರ ದೊಡ್ಡಮನೆ ಪ್ರಶಾಂತ ಶೆಟ್ಟಿ, ಮೆಲ್ಬೇಟ್ಟು ಕೃಷ್ಣ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಚಿಕ್ಕಮಾರಬೆಟ್ಟು, ಅರುಣ್ ಶೆಟ್ಟಿ ಮತ್ತಾವು, ಜಯಕರ ಶೆಟ್ಟಿ ಕೊಡಂಜ, ವರಂಗ ಸಹಕಾರಿ ಸಂಘದ ಅಧ್ಯಕ್ಷ ಲಕ್ಷ್ಮಣ ಆಚಾರ್, ಮುನಿಯಾಲು ಲಯನ್ಸ್ ಕ್ಲಬ್ ನ ಗೋಪಿನಾಥ್ ಭಟ್, ಪಡುಕುಡೂರು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಶೆಟ್ಟಿ, ಮುಖ್ಯ ಶಿಕ್ಷಕ ಹರೀಶ್ ಪೂಜಾರಿ, ಸಮಿತಿಯ ಗೌರವಾಧ್ಯಕ್ಷ ಸದಾಶಿವ ಉಪಾಧ್ಯಾಯ, ಪ್ರಧಾನ ಕಾರ್ಯದರ್ಶಿ ಹರೀಶ್ ಶೆಟ್ಟಿ ಪಡುಪರ್ಕಳ, ಕೋಶಾಧಿಕಾರಿ ಅಶೋಕ ಎಂ. ಶೆಟ್ಟಿ, ಸಮಿತಿಯ ಸದಸ್ಯರು,ಜನಪ್ರತಿನಿಧಿಗಳು, ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು. ಪಡುಪರ್ಕಳ ಶಂಕರ ಶೆಟ್ಟಿ ಸ್ವಾಗತಿಸಿ, ಶಂಕರ ಶೆಟ್ಟಿ ಪೂಜಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾತಿಬೆಟ್ಟು ಪ್ರಕಾಶ ಪೂಜಾರಿ ಮತ್ತು ಪಡುಕುಡೂರು ರಂಜಿತಾ ನಿರೂಪಿಸಿ, ವಂದಿಸಿದರು.
























