ಕಾರ್ಕಳ : ಬೈಕ್ಗೆ ಕಾರು ಡಿಕ್ಕಿಯಾದ ಪರಿಣಾಮವಾಗಿ ಸವಾರಿಬ್ಬರು ಗಾಯಗೊಂಡ ಘಟನೆ ಜೂ. 16ರಂದು ಕುಕ್ಕುಂದೂರಿನಲ್ಲಿ ಸಂಭವಿಸಿದೆ. ಬೈಂದೂರು ತಾಲೂಕು ರಾಗಿಹಕ್ಲುವಿನ ಮಣಿಕಂಠ ಎಂಬವರು ಸ್ಕೂಟರ್ನಲ್ಲಿ ಶ್ರೀಕಂಠ ಎಂಬವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಉಡುಪಿ ಕಾರ್ಕಳ ಮಾರ್ಗವಾಗಿ ಕಳಸಕ್ಕೆ ಹೋಗುತ್ತಿರುವಾಗ, ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಜಂಕ್ಷನ್ ಬಳಿ ಕಾರ್ಕಳ ಕಡೆಯಿಂದ ಹೆಬ್ರಿ ಕಡೆಗೆ ಸಾಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಸವಾರರಿಬ್ಬರು ಗಾಯಗೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಬೈಕ್ಗೆ ಕಾರು ಡಿಕ್ಕಿ – ಸವಾರರಿಗೆ ಗಾಯ






























































