ಹೆಬ್ರಿ : ಮಟ್ಕಾ ಜೂಜಾಟ – ಪೊಲೀಸ್‌ ದಾಳಿ

ಹೆಬ್ರಿ : ಹೆಬ್ರಿ ಪೇಟೆಯಲ್ಲಿರುವ ಗಣೇಶ ಕಾಂಪ್ಲೆಕ್ಸ್‌ನ ಎದುರುಗಡೆ ರಸ್ತೆ ಬದಿಯಲ್ಲಿ ಓರ್ವನು ಮಟ್ಕಾ ಜೂಜಾಟಕ್ಕೆ ಚೀಟಿ ಬರೆದು ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಹೆಬ್ರಿ ಪೊಲೀಸ್‌ ಠಾಣೆಯ ಪೊಲೀಸ್‌ ಉಪನಿರೀಕ್ಷಕ ಮಹೇಶ ಟಿ. ಎಂ. ಜೂ. 16ರಂದು ಸಿಬ್ಬಂದಿಯೊಂದಿಗೆ ದಾಳಿ ನಡೆಸಿ, ಆಗುಂಬೆ-ಮುಖ್ಯ ರಸ್ತೆಯ ಬದಿಯಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟದ ಚೀಟಿಯನ್ನು ಬರೆಯುತ್ತಿದ್ದ ಮಂಜುನಾಥನನ್ನು ಹಿಡಿದಿದ್ದಾರೆ. ಆತನ ಬಳಿ 1390/- ರೂ. ನಗದು, ಮಟ್ಕಾ ಬರೆದ ಚೀಟಿ-1, ಹಾಗೂ ಬಾಲ್ ಪೆನ್ನು-1 ಇದ್ದು ಇವುಗಳ ಬಗ್ಗೆ ವಿಚಾರಿಸಿದಾಗ ತನ್ನ ಸ್ವಂತ ಲಾಭಕ್ಕಾಗಿ ಸಾರ್ವಜನಿಕರಿಂದ ಮಟ್ಕಾ ಜೂಜಾಟದ ಬಗ್ಗೆ ಹಣ ಸಂಗ್ರಹಿಸುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































































error: Content is protected !!
Scroll to Top