ಮಂಡ್ಯ : ವೇಗವಾಗಿ ಕಾರು ಚಲಾಯಿಸಬೇಡಿ ಎಂದಿದ್ದಕ್ಕೆ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರ ತಂಡ ಹಲ್ಲೆ ಮಾಡಿರುವ ಘಟನೆ ನಾಗಮಂಗಲ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಸಂಭವಿಸಿದೆ. ಅಭಿಲಾಷ್ ಹಲ್ಲೆಗೊಳಗಾದ ಯುವಕ.
ಶನಿವಾರ ಮುಸ್ಲಿಂ ಯುವಕರ ಗುಂಪು ಬೆಳ್ಳೂರಿನ ಸಂತೆ ಬೀದಿಯಲ್ಲಿ ಅತಿ ವೇಗದಲ್ಲಿ ಪಟ್ಟಣದೊಳಗೆ ಕಾರು ಓಡಿಸಿಕೊಂಡು ಹೋಗಿದೆ. ಅಲ್ಲದೇ ಓವರ್ ಟೇಕ್ ಮಾಡುವಾಗ ಬೈಕ್ಗೆ ಟಚ್ ಆಗಿದೆ. ಇದನ್ನು ಅಭಿಲಾಷ್ ಹಾಗೂ ಅವರ ಜತೆಗಾರ ನಾಗೇಶ್ ಎಂಬುವರು ಪ್ರಶ್ನಿಸಿದ್ದರು. ಈ ವೇಳೆ ಸಣ್ಣ ಮಟ್ಟಿನ ಮಾತಿನ ಚಕಮಕಿ ನಡೆದಿತ್ತು. ಅದೇ ದ್ವೇಷವನ್ನು ಇಟ್ಟುಕೊಂಡಿದ್ದ ಮುಸ್ಲಿಂ ಯುವಕರು ಮೇ 28 ರಂದು ಇನ್ನಷ್ಟು ದೊಡ್ಡ ಗುಂಪನ್ನು ಕಟ್ಟಿಕೊಂಡು ಬಂದು ಅಭಿಲಾಷ್ ಮೇಲೆ ಹಲ್ಲೆ ಮಾಡಿದ್ದರು. ಅಭಿಲಾಷ್ ಮೇಲೆ ಹಲ್ಲೆ ಮಾಡುವುದನ್ನು ತಡೆಯಲು ಬಂದವರ ಮೇಲೂ ಮಾಡಿದ್ದಾರೆ. ಬ
ಮಹಿಳೆಗೆ ನಿಂದನೆ
ಮುಸ್ಲಿಂ ಯುವಕರು ತಡರಾತ್ರಿ ಅಭಿಲಾಷ್ ಮಾವ ನಾಗೇಶ್ ಮನೆ ಬಳಿ ತೆರಳಿ ದಾಂಧಲೆ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿದ್ದ ನಾಗೇಶ್ ಪತ್ನಿ ರಶ್ಮಿ ಬಾಗಿಲು ಹಾಕಿಕೊಂಡರೂ ಬಿಡಿದ ಮುಸ್ಲಿಂ ಯುವಕರು, ಬಾಗಿಲು ಬಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿ, ದಾಂಧಲೆಯನ್ನು ತೀರ್ವಗೊಳಿಸಿದ್ದಾರೆ ಎನ್ನಲಾಗುತ್ತಿದೆ. ಘಟನೆಯಿಂದ ನಾಗೇಶ್ ಕುಟುಂಬ ಆತಂಕದಲ್ಲಿದೆ. ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.































































