ಅಂಚೆ ಇಲಾಖೆಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ

ದೆಹಲಿ : ಭಾರತೀಯ ಅಂಚೆ ಕಛೇರಿಯು ಖಾಲಿಯಿರುವ ಪೋಸ್ಟ್‌ಮೆನ್ ಹುದ್ದೆಗಳ ಬೃಹತ್ ಸಂಖ್ಯೆಯ ಭರ್ತಿಗಾಗಿ ನೇಮಕಾತಿ ಅಧಿಸೂಚನೆಯನ್ನ ಬಿಡುಗಡೆ ಮಾಡಿದೆ.
ಅರ್ಜಿ ಸಲ್ಲಿಸಲು ಬಯಸುವವರು ಎಸ್ಸೆಸೆಲ್ಸಿ ವಿದ್ಯಾರ್ಹತೆಯನ್ನ ಹೊಂದಿರಬೇಕು. ಅಭ್ಯರ್ಥಿಗಳು ಕನಿಷ್ಠ ವಯಸ್ಸು 18 ರಿಂದ ಗರಿಷ್ಠ 40 ವರ್ಷಗಳ ನಡುವೆ ಇರಬೇಕು. ಸರಕಾರದ ನಿಯಮಗಳ ಪ್ರಕಾರ ಎಸ್‌ಸಿ, ಎಸ್‌ಟಿಗೆ 3 ವರ್ಷ ಮತ್ತು ಒಬಿಸಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇದೆ.

ಖಾಲಿ ಹುದ್ದೆಗಳ ಸಂಖ್ಯೆ
ಈ ಬೃಹತ್ ನೇಮಕಾತಿ ಅಧಿಸೂಚನೆಯ ಮೂಲಕ ಸುಮಾರು 32000 ಖಾಲಿ ಹುದ್ದೆಗಳನ್ನ ಭರ್ತಿ ಮಾಡಲಾಗುವುದು. ಈ ಸರಕಾರಿ ಉದ್ಯೋಗಗಳಲ್ಲಿ ಆಯ್ಕೆಯಾದವರಿಗೆ 12 ರಿಂದ 14 ಸಾವಿರ ಸಂಬಳ ನೀಡಲಾಗುವುದು ಮತ್ತು ಸರ್ಕಾರವು ಪರಿಚಯಿಸಿದ ಎಲ್ಲಾ ಸವಲತ್ತುಗಳನ್ನು ಪಡೆಯುತ್ತದೆ.
ಶುಲ್ಕ
ಈ ಸರ್ಕಾರಿ ನೌಕರರಿಗೆ ಅರ್ಜಿ ಸಲ್ಲಿಸಲು ಬಯಸುವವರು 100 ರೂಪಾಯಿ ಶುಲ್ಕವನ್ನು ಪಾವತಿಸಬೇಕು. ಮಹಿಳೆಯರು, SC, ST PWD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಅಧಿಕೃತ ವೈಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.









































































error: Content is protected !!
Scroll to Top