ಕಾರ್ಕಳ : ಬೈಲೂರು ವಿಶ್ವಭವನ ಹೋಟೆಲ್ ಮಾಲಕ ವಿಶ್ವನಾಥ ಗಡಿಯಾರ್ (89) ಅವರು ಮೇ 23ರಂದು ನಿಧನ ಹೊಂದಿದರು. ಹೊಟೇಲ್ ಉದ್ಯಮದ ಮೂಲಕ ಜನಾನುರಾಗಿಯಾಗಿದ್ದ ವಿಶ್ವನಾಥ ಅವರು ನೀರೆ ಬೈಲೂರು ಸಹಕಾರ ಸೇವಾ ಸಂಘದಲ್ಲಿ ಒಂದು ಅವಧಿಗೆ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಮೃತರು ಐವರು ಪುತ್ರಿಯರು, ನಾಲ್ವರು ಸಹೋದರರು, ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ.
ಹೊಟೇಲ್ ಉದ್ಯಮಿ ವಿಶ್ವನಾಥ ಗಡಿಯಾರ್ ನಿಧನ

May 23, 2024 / By
newskarkala desk































































