ಕೋಟ ಭಾಸ್ಕರ್‌ ಕಾರಂತ್‌ ನಿಧನ

ಕಾರ್ಕಳ : ಕಡಲತಡಿಯ ಭಾರ್ಗವ ಕೋಟ ಶಿವರಾಮ ಕಾರಂತ ಅವರ ಅಣ್ಣನ ಮಗ ತೆಳ್ಳಾರು ನಿವಾಸಿ ಭಾಸ್ಕರ್‌ ಕಾರಂತ್‌ (89) ಮೇ 21ರಂದು ನಿಧನ ಹೊಂದಿದರು. ನ್ಯೂಮೋನಿಯಾದಿಂದ ಬಳಲುತ್ತಿದ್ದ ಅವರು ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಂಗಳವಾರ ಬೆಳಿಗ್ಗೆ ಕೊನೆಯುಸಿರೆಳೆದರು. ಭಾಸ್ಕರ್‌ ಕಾರಂತರು ಆ ಕಾಲಕ್ಕೆ ಇಂಗ್ಲೇಂಡಿನಲ್ಲಿ ಇಂಜಿನಿಯರಿಂಗ್‌ ಪೂರೈಸಿದ್ದರು. ಅಲ್ಲೇ ವೃತ್ತಿ ಜೀವನ ಆರಂಭಿಸಿದ ಅವರು ನಿವೃತ್ತಿಯ ಅನಂತರ ಕಾರ್ಕಳದಲ್ಲಿ ಬಂದು ನೆಲೆಸಿದ್ದರು.

ಕಾರ್ಕಳ ರೋಟರಿ ಕ್ಲಬ್‌ನ ಸಕ್ರಿಯ ಸದಸ್ಯರಾಗಿದ್ದ ಭಾಸ್ಕರ್‌ ಕಾರಂತರು, ಸಾಹಿತ್ಯ ಸಂಘ, ಬ್ರಾಹ್ಮಣ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದರು. 89 ಇಳಿ ವಯಸ್ಸಿನಲ್ಲೂ ತಾವೇ ವೇಗವಾಗಿ ಕಾರು ಚಲಾಯಿಸುತ್ತಿದ್ದರು. ಮೃತರು ಪತ್ನಿ ಕಸ್ತೂರಿ ಕಾರಂತ್ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.





























































































































error: Content is protected !!
Scroll to Top