ಕಾರ್ಕಳ : ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರಿ ಆಫ್ ಇಂಡಿಯಾ 2024ರ ಮೇ 4ರಂದು ನಡೆಸಿದ CSEET ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್ ಪ.ಪೂ. ಕಾಲೇಜಿನ 21 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಾದ ಭಕ್ತಿ ಕಾಮತ್, ಸಾನ್ವಿ ರಾವ್, ಶೆಟ್ಟಿ ತ್ರಿಶಾ ವಿಠ್ಠಲ್, ಹೃತಿಕ್, ಜೀವನ್ ಗೌಡ, ಆಶೆಲ್, ಕೀರ್ತಿ ಪಾಟ್ಕರ್, ಅನ್ವಿತ, ಭವಿಷ್ಯ ಶೆಟ್ಟಿ, ರಾಹುಲ್, ಅನನ್ಯ ಜೈನ್, ಪ್ರತ್ವೀಕ್, ಪ್ರಥಮ್, ಚಿನ್ಮಯಿ, ಪ್ರಜ್ವಲ್ ರಾವ್, ಸುಖಿ ಸುಭಾಶ್, ಶ್ರೇಯಾ, ವಿನಯ್ ಪ್ರಶಾಂತ್, ಸುಪ್ರೀತ್ ಹೆಗ್ಡೆ, ಶ್ರೀಹರಿ ಹಾಗೂ ಸುವಿಕ್ಷಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಮುಂದಿನ ಹಂತದ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜು ಪ್ರಾಂಶುಪಾಲ ವಿದ್ವಾನ್ ಗಣಪತಿ ಭಟ್, ಆಡಳಿತ ಮಂಡಳಿಯವರು, CSEET ಸಂಯೋಜಕರಾದ ರಾಘವೇಂದ್ರ ರಾವ್ ಹಾಗೂ ಉಪನ್ಯಾಸಕ ವರ್ಗದವರು ಅಭಿನಂದಿಸಿದ್ದಾರೆ.
CSEET ಅರ್ಹತಾ ಪರೀಕ್ಷೆ – ಕ್ರಿಯೇಟಿವ್ ಕಾಲೇಜಿನ 21 ವಿದ್ಯಾರ್ಥಿಗಳು ಆಯ್ಕೆ
























