ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿದ ಇಬ್ಬರ ಬಂಧನ

ಕಾರ್ಕಳ : ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಂಡು ಸಾರ್ವಜನಿಕರ ನೆಮ್ಮದಿ ಭಂಗ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಉಳಿದಿಬ್ಬರು ತಪ್ಪಿಸಿಕೊಂಡು ಓಡಿಹೋಗಿದ್ದಾರೆ. ಭಾನುವಾರ ಕಸಬಾ ಸರಕಾರಿ ಆಸ್ಪತ್ರೆ ಬಳಿ ನಾಲ್ಕು ಮಂದಿ ಹೊಡೆದಾಡಿಕೊಳ್ಳುತ್ತಿರುವ ಕುರಿತು ಖಚಿತ ಮಾಹಿತಿಯ ಮೇರೆಗೆ ಕಾರ್ಕಳ ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದಾಗ ಶಂಕರ(50) ಮತ್ತು ಜಯಂತ (32) ಎಂಬವರು ಸಿಕ್ಕಿಬಿದ್ದಿದ್ದಾರೆ. ಬೀರಪ್ಪ ಮತ್ತು ಹನುಮಂತಪ್ಪ ಎಂಬವರು ಓಡಿಹೋಗಿದ್ದಾರೆ.





























































































































error: Content is protected !!
Scroll to Top