20 ಲ.ರೂ. ವರದಕ್ಷಿಣೆಗೆ ಬೇಡಿಕೆ : ಗಂಡ ಅತ್ತೆಯ ವಿರುದ್ಧ ದೂರು

ಹೆಬ್ರಿ : ವರದಕ್ಷಿಣೆಯಾಗಿ ಜಮೀನು ಮತ್ತು ಹಣ ಕೊಡಬೇಕೆಂದು ಹೆಂಡತಿ ಮತ್ತು ಏಳು ತಿಂಗಳ ಮಗುವಿಗೆ ಹಿಂಸೆ ನೀಡಿದ ಆರೋಪದಲ್ಲಿ ಹೆಬ್ರಿ ಚಾರ ಗ್ರಾಮ ನಿವಾಸಿ ರಮೇಶ್‌, ಆತನ ತಾಯಿ ಶಾರದಾ, ರಮೇಶನ ಬಾವ ರಾಘವೆಂದ್ರ, ರಮೇಶನ ಅಕ್ಕ ಉಮಾ ಮತ್ತು ಚಾರದ ಗಾಯತ್ರಿ ಎಂಬವರ ವಿರುದ್ಧ ಕಾವೇರಿ (25) ಎಂಬವರು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೂಲತಃ ಹಾವೇರಿಯವರಾದ ಕಾವೇರಿಯನ್ನು ರಮೇಶ 2023, ಫೆ. 1ರಂದು ಮದುವೆಯಾಗಿದ್ದು, 6 ತಿಂಗಳ ಬಳಿಕ ಊರಿನಲ್ಲಿರುವ ಜಮೀನನ್ನು ತನ್ನ ಹೆಸರಿಗೆ ಬರೆದುಕೊಂಡು ಕೊಡಬೆಕೆಂದು ಹಿಂಸೆ ನೀಡಲು ಪ್ರಾರಂಭಿಸಿದ್ದ. ಕಾವೇರಿ 7 ತಿಂಗಳ ಗರ್ಭೀಣಿಯಾಗಿದ್ದಾಗ ಹಲ್ಲೆ ಮಾಡಿದ್ದರು. ಕಳೆದ ಮೇ 18ರಂದು ಮಗುವಿಗೆ ಹಾಲು ಕುಡಿಸುತ್ತಿದ್ದಾಗ ಮಗವನ್ನು ಕಿತ್ತುಕೊಂಡು ಕೊಂದು ಹಾಕುವುದಾಗಿ ಬೆದರಿಸಿದ್ದರು. ಮೇ 19ರಂದು ಕಾವೇರಿಯ ಮನೆಯವರು ಮಾತುಕತೆಗ ಬಂದಾಗ ಮನೆಯೊಳಗೆ ಪ್ರವೇಶಿಸಲು ಬಿಡದೆ ಕಾವೇರಿ ಈ ಮನೆಗೆ ಬರಬೇಕಾದರೆ 20 ಲ.ರೂ. ವರದಕ್ಷಿಣೆ ಕೊಡಬೇಕು ಹಾಗೂ ಊರಿನಲ್ಲಿರುವ ಜಮೀನನ್ನು ರಮೇಶನ ಹೆಸರಿಗೆ ಬರೆದುಕೊಡಬೇಕೆಂದು ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ವರದಕ್ಷಿಣೆ ದೌರ್ಜನ್ಯ ತಡೆ ಕಾಯಿದೆ ವಿರುದ್ಧ ಕೇಸ್‌ ದಾಖಲಾಗಿದೆ.





























































































































error: Content is protected !!
Scroll to Top