ಕಾರ್ಕಳ : ಬೈಕ್ ಅಪಘಾತಕ್ಕೀಡಾಗಿ ಟಿಪ್ಪರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಾಯಗೊಂಡಿರುವ ಘಟನೆ ಮೇ 14ರಂದು ಬೋಳ ಗ್ರಾಮದಲ್ಲಿ ಸಂಭವಿಸಿದೆ.
ಬೋಳ ಗ್ರಾಮದ ಶ್ರೀ ವೀರಮಾರುತಿ ದೇವಸ್ಥಾನದ ಬಳಿ ಹಾದುಹೋಗಿರುವ ಮಂಜರಪಲ್ಕೆ-ಸಚ್ಚರಿಪೇಟೆ ಡಾಮಾರು ರಸ್ತೆಯ ಇಳಿಜಾರಿನ ತಿರುವಿನಲ್ಲಿ ಪ್ರಶಾಂತ್ ಎಂಬವರು ತಮ್ಮ ಬೈಕ್ ಅನ್ನು ಸಚ್ಚರಿಪೇಟೆ ಕಡೆಯಿಂದ ಮಂಜರಪಲ್ಕೆ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದು, ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಬೈಕ್ ಸವಾರನ ನಿಯಂತ್ರಣ ತಪ್ಪಿ ಬಿದ್ದು ರಸ್ತೆಯಲ್ಲಿ ಜಾರಿಕೊಂಡು ಎದುರಿನಿಂದ ಜರಪಲ್ಕೆ ಕಡೆಯಿಂದ ಸಚ್ಚರಿಪೇಟೆ ಕಡೆಗೆ ಮಣಿಕಂಠ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಟಿಪ್ಪರ್‌ನ ಹಿಂಬದಿ ಚಕ್ರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪ್ರಶಾಂತ್ ಗಾಯಗೊಂಡಿರುತ್ತಾರೆ. ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿರುತ್ತದೆ.
ಟಿಪ್ಪರ್‌ಗೆ – ಬೈಕ್ ಡಿಕ್ಕಿ : ಸವಾರನಿಗೆ ಗಾಯ

































































