ದಕ್ಷಿಣ-ಕನ್ನಡ ಮ್ಯೂಚುಯಲ್ ಬೆನಿಫಿಟ್ ನಿಧಿ ಲಿಮಿಟೆಡ್ – 6ನೇ ಶಾಖೆ ಶುಭಾರಂಭ

ಕಾರ್ಕಳ : ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ನೋಂದಾಯಿಸಲ್ಪಟ್ಟ ದಕ್ಷಿಣ-ಕನ್ನಡ ಮ್ಯೂಚುಯಲ್ ಬೆನಿಫಿಟ್ ನಿಧಿ ಲಿಮಿಟೆಡ್‌ನ 6ನೇ ಶಾಖೆ ಕಾರ್ಕಳ ಸ್ಟೇಟ್ ಬ್ಯಾಂಕ್ ಹತ್ತಿರ ಶ್ರೀ ಕೃಷ್ಣ ಟವರ್ ಸಿದ್ಧಿ ಮೋಟಾರ್ಸ್ ಮೇಲೆ ಮೇ 18ರಂದು ಸಂಜೆ 4.30ಕ್ಕೆ ಶುಭಾರಂಭಗೊಳ್ಳಲಿದೆ.
ದಕ್ಷಿಣ ಕನ್ನಡ ಮ್ಯೂಚುಯಲ್ ಬೆನಿಫಿಟ್ ನಿಧಿ ಅಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸ್ಥಾಪಕ ಸದಸ್ಯ ಆಲ್ವಿನ್ ಜೋಯಲ್ ನೊರೊನ್ಹಾ ಉದ್ಘಾಟಿಸಲಿದ್ದು, ಶಾಸಕ ವಿ. ಸುನಿಲ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉದಯ ಶೆಟ್ಟಿ ಮುನಿಯಾಲು, ಕರ್ನಾಟಕ ರಾಜ್ಯ ಕ್ವಾರಿ ಆಂಡ್ ಕ್ರಶರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ, ಸಿದ್ದಿ ಮೋಟಾರ್ಸ್ ಮಾಲಕ ಸಚ್ಚಿಂದ್ರ ಶೆಟ್ಟಿ, ದಕ್ಷಿಣ ಕನ್ನಡ ಮ್ಯೂಚುಯಲ್ ಬೆನಿಫಿಟ್ ನಿಧಿ ಅಮಿಟೆಡ್ ಸುಳ್ಯ ಗುತ್ತಿಗಾರ ಶಾಖೆ ಅಧ್ಯಕ್ಷ ಸತೀಶ್ ನಾಯಕ್ ಉಪಸ್ಥಿತರಿರಲಿದ್ದಾರೆ.





























































































































error: Content is protected !!
Scroll to Top