ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಅವರಿಗೆ ಸನ್ಮಾನ

ಹೆಬ್ರಿ : ರಾಜ್ಯ ವಿಭೂಷಣ ಶಿಕ್ಷಕ, ಜಿಲ್ಲಾ ಆದರ್ಶ ಶಿಕ್ಷಕ ಮತ್ತು ಚಾಣಕ್ಯ ಶಿಕ್ಷಕ ಪ್ರಶಸ್ತಿಯನ್ನು ಪಡೆದ ಮುನಿಯಾಲು ಸರಕಾರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ (1990-91) ಮುದ್ರಾಡಿ ಪ್ರೌಢಶಾಲೆಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಅವರನ್ನು ಅವರ ಸ್ವಗೃಹದಲ್ಲಿ ಸಹಪಾಠಿಗಳು ಸನ್ಮಾನಿಸಿದರು.

ಅಭಿನಂದನಾ ನುಡಿಗಳನ್ನಾಡಿದ ಜಿ. ಪಂ. ಸದಸ್ಯೆ ಜ್ಯೋತಿ ಹರೀಶ್, ಬಾಲ್ಯದಿಂದಲೂ ಪ್ರತಿಭಾನ್ವಿತರಾಗಿದ್ದ ಗೆಳೆಯ ಚಂದ್ರಶೇಖರ ಭಟ್ಟರ ಸಾಧನೆಯನ್ನು ಕಂಡು ಖುಷಿಯಾಗುತ್ತದೆ. ಸದಾ ಸಮಾಜಮುಖಿ ಚಟುವಟಿಕೆಗಳಲ್ಲಿ ನಿರತರಾಗಿರುವ ಇವರು ಕೇವಲ ಶೈಕ್ಷಣಿಕ ಕ್ಷೇತ್ರ ಮಾತ್ರವಲ್ಲದೆ ಎಲ್ಲ ರಂಗಗಳಲ್ಲೂ ತೊಡಗಿಸಿಕೊಂಡಿರುವ ಮೂಲಕ ಅರ್ಹವಾಗಿಯೇ ವಿವಿಧ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಯಕ್ಷಗಾನ ಕಲಾವಿದ ರಾಮದಾಸ್ ನಾಯಕ್ ಕಾಡುಹೊಳೆ, ಚಂದ್ರಶೇಖರ ಭಟ್ಟರು ಎಲ್ಲರೊಂದಿಗೆ ಬೆರೆಯುವ ಮೂಲಕ ಸ್ನೇಹಿತರ ಪ್ರೀತಿಗೆ ಪಾತ್ರರಾಗಿದ್ದರು. ಶಿಕ್ಷಕರಾಗಿ ಮಕ್ಕಳಿಗೆ ಮೌಲ್ಯಭರಿತ ಶಿಕ್ಷಣವನ್ನು ನೀಡುತ್ತಾ ಅವರ ಏಳಿಗೆಯನ್ನು ಕಂಡು ಖುಷಿಪಡುತ್ತಾ ಜೀವನವನ್ನು ನಡೆಸುವ ನಿಷ್ಕಲ್ಮಶ ವ್ಯಕ್ತಿತ್ವ ಅವರದ್ದು. ಉತ್ತಮ ಕಾರ್ಯಕ್ರಮ ನಿರೂಪಕರು, ಸಂಘಟನಾ ಚತುರರು ಆಗಿರುವ ಅವರ ಸಾಧನೆ ನಮಗೆಲ್ಲರಿಗೂ ಹೆಮ್ಮೆಯನ್ನು ತಂದಿದೆ ಎಂದರು.

ರೇವತಿ ನಾಯಕ್ ಕಡ್ತಲ ಮತ್ತು ಸುನೀತಾ ಕುಲಾಲ್ ಶೃಂಗೇರಿ ಅನಿಸಿಕೆ ವ್ಯಕ್ತಪಡಿಸಿದರು. ಪ್ರಗತಿಪರ ಕೃಷಿಕ ಉದಯ ನಾಯಕ್ ಎಳ್ಳಾರೆ ಅಧ್ಯಕ್ಷತೆ ವಹಿಸಿದ್ದರು. ಚಂದ್ರಶೇಖರ ಭಟ್ ಅವರ ಸಹೋದರ ನಾರಾಯಣ ಭಟ್, ಅಶೋಕ್ ಪೂಜಾರಿ ಮುದ್ರಾಡಿ, ಸಹಪಾಠಿಗಳಾದ ಲತಾ ಶೆಟ್ಟಿ ಮುದ್ರಾಡಿ, ಶಶಿಕಲಾ ಶೆಟ್ಟಿ ಪಡುಕುಡೂರು ಮಣಿಪಾಲ, ಸುಕನ್ಯಾ ಶೆಟ್ಟಿ ಮುಟ್ಲುಪಾಡಿ, ಶ್ಯಾಮಲಾ ಪ್ರಭು ಆತ್ರಾಡಿ, ಅನಘಾ ಆತ್ರಾಡಿ, ಚಂದ್ರಶೇಖರ ಭಟ್ಟರ ಪತ್ನಿ ರಮ್ಯಾ ಭಟ್ ಸೇರಿದಂತೆ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು. ದಿನೇಶ್ ಶೆಟ್ಟಿ ಮುಟ್ಲುಪಾಡಿ ಸನ್ಮಾನ ಪತ್ರ ವಾಚಿಸಿದರು. ರವಿ ಶೆಟ್ಟಿ ಮುಟ್ಲುಪಾಡಿ ಸ್ವಾಗತಿಸಿದರು. ಸರಕಾರಿ ಪ್ರೌಢಶಾಲೆ ಕೊಯಿಲ ಬಂಟ್ವಾಳದ ಶಿಕ್ಷಕ ಜನಾರ್ದನ ಆಚಾರ್ಯ ಪಡುಕುಡೂರು ಕಾರ್ಯಕ್ರಮ ನಿರೂಪಿಸಿ, ನಾಗರಾಜ್ ವಂದಿಸಿದರು.































































































































error: Content is protected !!
Scroll to Top