ಅಧ್ಯಕ್ಷರಾಗಿ ಕಿಶೋರ್ ಶೆಟ್ಟಿ – ಕಾರ್ಯದರ್ಶಿಯಾಗಿ ರಂಜಿತ್ ಕೌಡೂರು – ಕೋಶಾಧಿಕಾರಿಯಾಗಿ ದೇವೇಂದ್ರ ನಾಯ್ಕ
ಕಾರ್ಕಳ : ಕಣಜಾರು ಶ್ರೀ ಆನಂದ ಶೆಟ್ಟಿ ಸರಕಾರಿ ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಕಿಶೋರ್ ಶೆಟ್ಟಿ, ಕಾರ್ಯದರ್ಶಿಯಾಗಿ ರಂಜಿತ್ ಶೆಟ್ಟಿ ಕೌಡೂರು ಹಾಗೂ ಕೋಶಾಧಿಕಾರಿಯಾಗಿ ದೇವೇಂದ್ರ ನಾಯ್ಕ ಆಯ್ಕೆಯಾಗಿದ್ದಾರೆ. ಮೇ 12ರಂದು ಶಾಲೆಯಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಉಪಾಧ್ಯಕ್ಷರಾಗಿ ವಿಕೇತ ಪೂಜಾರಿ ಕಣಜಾರು, ಮಲ್ಲಿಕಾ ಶೆಟ್ಟಿ ಹಾಗೂ ಅಲ್ತಾಫ್ ಆಲಿ, ಜೊತೆ ಕಾರ್ಯದರ್ಶಿಯಾಗಿ ಪ್ರಕಾಶ್ ಶೆಟ್ಟಿ ಕಣಜಾರು ಹಾಗೂ ಸಂಧ್ಯಾ ಆಚಾರ್ಯ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿಶ್ವೇಶ್ ದೇವಾಡಿಗ ಹಾಗೂ ವಿಂಧ್ಯಾ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರಜ್ವಲ್ ಭಂಡಾರಿ, ಎಡ್ವಿನ್ ಮೆಂಡೋನ್ಸಾ ಹಾಗೂ ವಿಜೇತ್ ಶೆಟ್ಟಿ, ಕಾರ್ಯಕಾರಿಣಿ ಸದಸ್ಯರಾಗಿ ರಾಕೇಶ್ ಶೆಟ್ಟಿ ಕೌಡೂರು, ವಿಘ್ನೇಶ್ ನಾಯ್ಕ್ , ಕಿಶೋರ್ ಶೆಟ್ಟಿ ಕಣಜಾರು, ಉದಯ ನಾಯಕ್, ಸುಧಾಕರ ಆಚಾರ್ಯ, ಉಮೇಶ್ ನಾಯ್ಕ್, ಪ್ರವೀಣ್ ಕುಂದರ್, ಪ್ರಶಾಂತ್ ಪೂಜಾರಿ, ಶರತ್ ಪ್ರಭು, ಮಹೇಶ್ ಶೆಟ್ಟಿ, ವಿನಯ್ ಆಚಾರ್ಯ, ವಿರಾಜ್ ಶೆಟ್ಟಿ, ವಿನಯ್ ಆಚಾರ್ಯ ಅನ್ಯಾರ್ ಕಟ್ಟೆ, ಸನತ್ ಆಚಾರ್ಯ ಅನ್ಯಾರ್ ಕಟ್ಟೆ, ರಿಯಾಜ್ ಕಂಪಾನ್, ದಿಲೀಪ್ ಪೂಜಾರಿ ಕಣಜಾರು, ನಿತೇಶ್ ಶೆಟ್ಟಿ ಕಣಜಾರು, ನಿಧೀಶ್ ಆಚಾರ್ಯ ಹಾಗೂ ವಾಣಿಶ್ರೀ ಆಚಾರ್ತಿ ಮಾಣಿಕುಮೇರಿ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ನವೀನ ಕುಮಾರಿ ಹಾಗೂ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
































































