ಕಾರ್ಕಳದಲ್ಲಿ ಮತದಾನಕ್ಕೆ ಸಕಲ ಸಿದ್ಧತೆ

ಕಾರ್ಕಳ : ಏ. 26 ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ. ಕ್ಷೇತ್ರದಲ್ಲಿ ಒಟ್ಟು 209 ಮತಗಟ್ಟೆಗಳಿದ್ದು, ಇದರಲ್ಲಿ 27 ನಕ್ಸಲ್‌ ಪೀಡಿತ ಮತಗಟ್ಟೆಗಳೊಂದಿಗೆ 42 ಸೂಕ್ಷ್ಮ ಮತಗಟ್ಟೆ, 2 ವಲ್ನರೇಬಲ್‌ ಮತಗಟ್ಟೆ ಹಾಗೂ ಈ ಹಿಂದೆ ಮತದಾನದ ಸಂದರ್ಭ ಕಾನೂನು ಉಲ್ಲಂಘಣೆಗಾಗಿ ಪ್ರಕರಣ ದಾಖಲಾದ 11 ಮತಗಟ್ಟೆಗಳಿವೆ.

ಸಖಿ ಮತಗಟ್ಟೆ
ಕಾರ್ಕಳ ತಾಲೂಕಿನಲ್ಲಿ 3 ಮತ್ತು ಹೆಬ್ರಿ ತಾಲೂಕಿನಲ್ಲಿ 2 ಸೇರಿದಂತೆ ಒಟ್ಟು 5 ಸಖಿ ಮತಗಟ್ಟೆಗಳಿದ್ದು, ಇಲ್ಲಿ ಮತಗಟ್ಟೆ ಅಧಿಕಾರಿಯಿಂದ ಹಿಡಿದು, ಮತಗಟ್ಟೆ ಸಹಾಯಕರು, ಕಾವಲು ಸಿಬ್ಬಂದಿವರೆಗೆ ಸಂಪೂರ್ಣವಾಗಿ ಮಹಿಳೆಯರಿಂದಲೇ ನಿರ್ವಹಿಸಲ್ಪಡುತ್ತದೆ. 1 ಪಿಡಬ್ಲೂಡಿ ಮತಗಟ್ಟೆ ಮತ್ತು 1 ಎಥಿನಿಕ್‌ ಮತಗಟ್ಟೆ, 1 ಯುವ ಮತಗಟ್ಟೆ ಹಾಗೂ 1 ಮಿಶನ್‌ ಮತಗಟ್ಟೆಯಿದೆ.

ಸಿಬ್ಬಂದಿ
ಪ್ರತಿ ಮತಗಟ್ಟೆಯಲ್ಲಿ 1 ಪಿಆರ್‌ಓ, 1 ಎಪಿಆರ್‌ಓ, 2 ಪೋಲಿಂಗ್‌ ಆಫೀಸರ್‌ ಹಾಗೂ 1 ಡಿ ಗ್ರೂಪ್‌ನ್ನು ಒಳಗೊಂಡ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, 209 ಮತಗಟ್ಟೆಗಳಲ್ಲಿ 1250 ಮಂದಿ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಯ ಪ್ರಯಾಣಕ್ಕಾಗಿ ವಾಹನ ವ್ಯವಸ್ಥೆ ಮಾಡಲಾಗಿದೆ.

ಪೊಲೀಸ್‌ ನಿಯೋಜನೆ
ನಿರ್ಭೀತಿಯಿಂದ ಮುಕ್ತವಾಗಿ ಮತದಾನ ನಡೆಸುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.‌ 302 ಮಂದಿ ಸಿವಿಲ್‌ ಸ್ಟಾಪ್‌, 85 ಮಂದಿ ಹೋಮ್‌ ಗಾರ್ಡ್‌, 158 ಮಂದಿ ಗುಜರಾತ್ ಪೊಲೀಸ್‌ (ಸ್ಟೇಟ್‌ ಆರ್ಮ್‌ಡ್‌ ಪೊಲೀಸ್) ಒಳಗೊಂಡಂತೆ ಒಟ್ಟು 515 ಪೊಲೀಸರು ನಿಯೋಜನೆಗೊಂಡಿದ್ದಾರೆ. ಇವರಲ್ಲಿ ಸಾಮಾನ್ಯ ಬೂತ್‌ಗಳಲ್ಲಿ ಓರ್ವ ಪೊಲೀಸ್‌ ಸಿಬ್ಬಂದಿ ಇರುತ್ತಾರೆ. ಸೂಕ್ಷ್ಮಮತಗಟ್ಟೆಗಳಲ್ಲಿ 1 ಹೆಡ್‌ಕಾನ್ಸ್ಟೇಬಲ್‌, 1 ಹೋಮ್‌ ಗಾರ್ಡ್‌ ಹಾಗೂ 4 ಮಂದಿ ಸ್ಟೇಟ್‌ ಆರ್ಮ್ಡ್‌ ಪೊಲೀಸ್‌ ಕರ್ತವ್ಯದಲ್ಲಿರುತ್ತಾರೆ. ಮುಂಡ್ಕೂರು, ರೆಂಜಾಳ, ಹೊಸ್ಮಾರು/ನಲ್ಲೂರು, ಮಾಳ, ಬೋಳ, ಸಾಣೂರು, ಸೋಮೇಶ್ವರ ಸೇರಿದಂತೆ ಒಟ್ಟು 7 ಚೆಕ್‌ ಪೋಸ್ಟ್‌ಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.

ಮಸ್ಟರಿಂಗ್‌ ಕೇಂದ್ರ
ಮಂಜುನಾಥ ಪೈ ಮೆಮೋರಿಯಲ್‌ ಪ್ರಥಮ ದರ್ಜೆ ಕಾಲೇಜು ಮಸ್ಟರಿಂಗ್‌ ಹಾಗೂ ಡಿ ಮಸ್ಟರಿಂಗ್‌ ಸೆಂಟರ್‌ ಆಗಿದೆ. ಇಂದು (ಏ. 25) ಮಧ್ಯಾಹ್ನ ಮಸ್ಟರಿಂಗ್‌ ಸೆಂಟರ್‌ನಿಂದ 209 ಬೂತ್‌ಗಳಿಗೆ ಮತಪೆಟ್ಟಿಗೆಗಳನ್ನು ಸಾಗಿಸಲಾಯಿತು. ‌

ನಾಳೆ ಮುಂಜಾನೆ 5.30ರಿಂದ 6.30ರವರೆಗೆ ಮಾಕ್‌ ಪೊಲೀಂಗ್‌ (ಅಣುಕು ಮತದಾನ) ನಡೆಯಲಿದ್ದು, ನಂತರ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿ ಸಂಜೆ 6 ಗಂಟೆಯವರೆಗೆ ನಡೆಯಲಿದೆ.

ಮತಪೆಟ್ಟಿಗೆಯೊಂದಿಗೆ ಮಸ್ಟರಿಂಗ್‌ ಕೇಂದ್ರದಿಂದ ಹೊರಟ ಸಿಬ್ಬಂದಿ






































































































































error: Content is protected !!
Scroll to Top