ಜೆ.ಇ.ಇ ಮೈನ್ ಫಲಿತಾಂಶ – ಕ್ರಿಯೇಟಿವ್ ಕಾಲೇಜಿನ 7 ವಿದ್ಯಾರ್ಥಿಗಳಿಗೆ 98ಕ್ಕಿಂತ ಅಧಿಕ ಪರ್ಸಂಟೈಲ್‌

ಕಾರ್ಕಳ : ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ಜೆ.ಇ.ಇ (ಮೈನ್) ಅಂತಿಮ ಹಂತದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ 7 ವಿದ್ಯಾರ್ಥಿಗಳು 98ಕ್ಕಿಂತ ಅಧಿಕ ಪರ್ಸಂಟೈಲ್‌ ಪಡೆದಿದ್ದಾರೆ.

ವಿದ್ಯಾರ್ಥಿಗಳಾದ ದುರ್ಗಾಶ್ರೀ ಎಂ. 99.1312779, ನೇಹಾ ಕೆ. ಉದಪುಡಿ 98.9485981, ಪ್ರಣವ್ ಟಿ. ಎಂ. 98.6313992, ಆದಿತ್ಯ ಅಲಗೌಡ ಪಾಟೀಲ್ 98.5573008, ಯುವರಾಜ್ ಬಿ. ಕೆ. 98.287914, ಅಕುಲ್ ಕೃಷ್ಣ ಎಂ. ಎಸ್. 98.0229479, ಪಾರ್ಥ ಎ. ಬಿ. 98.0229479 ಪರ್ಸಂಟೈಲ್ ಗಳಿಸಿರುತ್ತಾರೆ. ಪರೀಕ್ಷೆ ಬರೆದ 441 ವಿದ್ಯಾರ್ಥಿಗಳಲ್ಲಿ 126 ಮಂದಿ ಜೆ.ಇ.ಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಪಡೆದಿರುತ್ತಾರೆ.
ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜು ಪ್ರಾಂಶುಪಾಲರು, ಆಡಳಿತ ಮಂಡಳಿ, ಉಪನ್ಯಾಸಕ ವೃಂದದವರು ಹಾಗೂ ಜೆ.ಇ.ಇ ಸಂಯೋಜಕ ನಂದೀಶ್ ಹೆಚ್. ಬಿ. ಅಭಿನಂದಿಸಿದ್ದಾರೆ.























































































































































error: Content is protected !!
Scroll to Top