ತನ್ನದೇ ಬಸ್‌ನಡಿಗೆ ಬಿದ್ದು ಮಾಲಕ ಸಾವು

ಉಡುಪಿ : ತನ್ನ ಸ್ವಂತ ಬಸ್‌ನ ಚಕ್ರದಡಿ ಸಿಲುಕಿ ಮಾಲಕ ದಾರುಣವಾಗಿ ಮೃತಪಟ್ಟ ಘಟನೆ ಮಣಿಪಾಲ ಆತ್ರಾಡಿ ಬಳಿಯ ಗ್ಯಾರೇಜ್ ಒಂದರಲ್ಲಿ ಬುಧವಾರ ನಡೆದಿದೆ. ಮಾಂಡವಿ ಬಸ್ ಮಾಲಕ ದಯಾನಂದ್ ಶೆಟ್ಟಿ ಮೃತ ದುರ್ದೈವಿ.
ದಯಾನಂದ್ ಶೆಟ್ಟಿ ಅವರು ದುರಸ್ತಿಗೆಂದು ಬಸ್ಸನ್ನು ಗ್ಯಾರೇಜಿನಲ್ಲಿಟ್ಟಿದ್ದರು. ನಿನ್ನೆ ದುರಸ್ತೆ ಬಗ್ಗೆ ಪರಿಶೀಲಿಸಲು ಗ್ಯಾರೇಜ್‌ಗೆ ಬಂದಿದ್ದರು. ಈ ವೇಳೆ ಅವರು ಬಸ್ ಮುಂದೆ ನಿಂತಿರುವ ಅರಿವಿಲ್ಲದೆ ಮೆಕ್ಯಾನಿಕ್ ಬಸ್ ಚಲಾಯಿಸಿದ್ದಾನೆ. ಪರಿಣಾಮ ಮುಂದೆ ನಿಂತಿದ್ದ ದಯಾನಂದ್ ಅವರ ಮೇಲೆ ಬಸ್‌ನ ಮುಂದಿನ ಚಕ್ರಗಳು ಹರಿದುಹೋಗಿ ಆಸ್ಪತ್ರೆಗೆ ಕೊಂಡೊಯ್ದರೂ ಪ್ರಯೋಜನವಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





























































































































error: Content is protected !!
Scroll to Top