ಮಾ.17ರಂದು ಶಿವಮೊಗ್ಗಕ್ಕೆ ಪ್ರಧಾನಿ ಮೋದಿ

ಹೊಸದಿಲ್ಲಿ: ಈ ಬಾರಿ 400 ಸೀಟುಗಳನ್ನು ಪಡೆದು ನರೇಂದ್ರ ಮೋದಿಯನ್ನು ಮೂರನೇ ಬಾರಿ ಪ್ರಧಾನಿ ಮಾಡುವ ಗುರಿಯೊಂದಿಗೆ ಚುನಾವಣಾ ಅಖಾಡಕ್ಕಿಳಿದಿರುವ ಬಿಜೆಪಿ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದಲ್ಲೂ ಭರ್ಜರಿ ಪ್ರಚಾರ ಕೈಗೊಳ್ಳಲು ವೇಳಾಪಟ್ಟಿ ನಿಗದಿಗೊಳಿಸಿದೆ. ಮಾರ್ಚ್ 15ರಿಂದ 19ರವರೆಗೆ ದಕ್ಷಿಣ ಭಾರತದಲ್ಲಿ ಮೋದಿ ಅವರ 15 ರಾಲಿ ಹಾಗೂ ಸಾರ್ವಜನಿಕ ಸಭೆಗಳು ನಿಗದಿಯಾಗಿವೆ.ಕರ್ನಾಟಕದ ಕೋಲಾರ, ಶಿವಮೊಗ್ಗ, ಬೀದರ್‌, ಧಾರವಾಡದಲ್ಲಿ ಮೋದಿ ಮೊದಲ ಸುತ್ತಿನ ಪ್ರಚಾರ ಕೈಗೊಳ್ಳಿದ್ದಾರೆ.

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರಧಾನಿ ಮೋದಿ ರೋಡ್ ಶೋ, ಸಮಾವೇಶಕ್ಕೆ ಯೋಜನೆ ರೂಪಿಸಲಾಗಿದೆ. ಮಾರ್ಚ್ 17ರಂದು ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ಱಲಿ ನಡೆಯಲಿದೆ. ಶಿವಮೊಗ್ಗದಲ್ಲಿ 4 ಕ್ಷೇತ್ರಗಳನ್ನೊಳಗೊಂಡ ಸಮಾವೇಶ ಆಯೋಜಿಸಲಾಗಿದ್ದು, ಒಟ್ಟಾರೆಯಾಗಿ ರಾಜ್ಯದಲ್ಲಿ 4 ಸಾರ್ವಜನಿಕ ರಾಲಿ ನಡೆಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಮೋದಿ ಸಮಾವೇಶಕ್ಕೆ ಸಿದ್ಧತೆ ಮಾಡಲಾಗುತ್ತಿದೆ.
ಲೋಕಸಭೆ ಚುನಾವಣೆ ದಿನಾಂಕ ಬಹುತೇಕ ಈ ವಾರ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ ಉತ್ತರ ಭಾರತದಾದ್ಯಂತ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ. ಹಲವಾರು ಮಹತ್ವದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಜೊತೆಗೆ ಚುನಾವಣಾ ಪ್ರಚಾರ ಅಭಿಯಾನಗಳನ್ನೂ ನಡೆಸುತ್ತಿದ್ದಾರೆ.

ಮೋದಿ ದಕ್ಷಿಣ ಭಾರತ ಪ್ರವಾಸ ವೇಳಾಪಟ್ಟಿ

ಮಾರ್ಚ್ 15 : ಕೋಲಾರ, ಸೇಲಂ, ಪಾಲಕ್ಕಾಡ್
ಮಾರ್ಚ್ 16 : ಕನ್ಯಾಕುಮಾರಿ, ವಿಶಾಖಪಟ್ಟಣಂ, ಜಹೀರಾಬಾದ್
ಮಾರ್ಚ್ 17 : ಪತ್ತನಂತ್ತಿಟ್ಟ, ಶಿವಮೊಗ್ಗ, ಅಮರಾವತಿ
ಮಾರ್ಚ್ 18 : ಮಲ್ಕಾಜ್​ಗಿರಿ, ಬೀದರ್, ಕೊಯಮತ್ತೂರು
ಮಾರ್ಚ್ 19: ನಾಗರ್ ಕರ್ನೂಲ್, ಧಾರವಾಡ, ಏಲೂರು































































































































error: Content is protected !!
Scroll to Top