ಬಡ, ಮಧ್ಯಮ ವರ್ಗದವರ ಬಂಗಾರದ ಕನಸಿಗೆ ಕೊಳ್ಳಿ
ಬೆಂಗಳೂರು: ಮದುವೆ ಸೀಸನ್ ಆರಂಭವಾಗಿರುವಾಗಲೇ ಜನರಿಗೆ ಚಿನ್ನದ ಬೆಲೆ ಶಾಕ್ ನೀಡಿದೆ. ಚಿನ್ನದ ಬೆಲೆ 10 ಗ್ರಾಂಗೆ 67 ಸಾವಿರ ರೂ. ದಾಟಿ ಮುನ್ನುಗ್ಗಿದ್ದು, ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ.
ಬಡವರು ಮತ್ತು ಮಧ್ಯಮ ವರ್ಗದವರ ಪಾಲಿಗೆ ಇನ್ನು ಚಿನ್ನ ಖರೀದಿ ಗಗನ ಕುಸುಮವಾಗಲಿದೆ. ಭಾನುವಾರ ಬಂಗಾರದ ರೇಟ್ ಚಿನಿವಾರಪೇಟೆಯ ಇತಿಹಾಸದಲ್ಲೇ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಚಿನ್ನದ ಬೆಲೆ 67 ಸಾವಿರದ ಗಡಿ ದಾಟಿದ್ದು, ಬೆಳ್ಳಿ 75 ಸಾವಿರವನ್ನು ಕ್ರಾಸ್ ಮಾಡಿದೆ.
ನಿನ್ನೆ ಚಿನಿವಾರ ಪೇಟೆಯಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 67,800 ರೂ., 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 61,100 ರೂ.
ಮತ್ತು 1 ಕೆ.ಜಿ ಬೆಳ್ಳಿಗೆ 75,000 ರೂ. ಇತ್ತು. ಇದು ಸಾರ್ವಕಾಲಿಕ ಅಧಿಕ ಬೆಲೆ ಎನ್ನಲಾಗಿದೆ.
ಬಂಗಾರ ಯಾವತ್ತೂ ಈ ರೇಟ್ಗೆ ತಲುಪಿರಲಿಲ್ಲ. ಅಕ್ಷಯ ತೃತೀಯಸಂದರ್ಭದಲ್ಲಿ ಚಿನ್ನಕ್ಕೆ ಬಹಳ ಬೇಡಿಕೆ ಇರುವುದರಿಂದ ಬೆಲೆ 70 ಸಾವಿರ ತನಕ ಏರಬಹುದು ಎಂದು ಜ್ಯುವೆಲ್ಲರಿ ಅಸೋಸಿಯೇಷನ್ ಖಜಾಂಚಿ ರವಿಕುಮಾರ್ ಹೇಳಿದ್ದಾರೆ.































































