ಬೈಕ್‌ಗಳ ಡಿಕ್ಕಿ : ಸವಾರರಿಗೆ ಗಾಯ

ಕಾರ್ಕಳ : ನಿಟ್ಟೆ ಭ್ರಾಮರಿ ಜಂಕ್ಷನ್‌ ಬಳಿ ಕಾರ್ಕಳ-ಮಂಗಳೂರು ರಾಜ್ಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಎರಡು ಬೈಕ್‌ಗಳು ಡಿಕ್ಕಿಯಾಗಿದ್ದು, ಸಂಭವಿಸಿದ ಅಪಘಾತದಲ್ಲಿ ಎರಡೂ ಬೈಕ್‌ಗಳ ಸವಾರರು ಮತ್ತು ಸಹಸವಾರ ಗಾಯಗೊಂಡಿದ್ದಾರೆ.

ಫೆ. 2ರಂದು ರಾತ್ರಿ 11 ಗಂಟೆ ವೇಳೆಗೆ ನಿಟ್ಟೆಯಿಂದ ಕಾರ್ಕಳ ಕಡೆಗೆ ಅತಿವೇಗವಾಗಿ ಹೋಗುತ್ತಿದ್ದ ಬೈಕ್ ಓವರ್‌ಟೇಕ್‌ ಮಾಡುವ ಭರದಲ್ಲಿ ತೀರಾ ಬಲಬದಿಗೆ ಬಂದು ಇನ್ನೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಈ ಬೈಕ್‌ನ ಹಿಂಬದಿ ಸವಾರರಾಗಿದ್ದ ಬೋಳ ರಾಮ ಎಂಬವರು ರಸ್ತೆಗೆ ಬಿದ್ದು ಗಂಭಿರವಾಗಿ ಗಾಯ ಗೊಂಡಿದ್ದು, ಬೈಕ್‌ ಚಲಾಯಿಸುತ್ತಿದ್ದ ಶೋಭರಾಜ್‌ ಮತ್ತು ಡಿಕ್ಕಿ ಹೊಡೆದ ಬೈಕ್‌ ಸವಾರನೂ ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















































































error: Content is protected !!
Scroll to Top