ದೇಹ ಗಟ್ಟಿಯಾಗಬೇಕೆಂದು ಕಬ್ಬಿಣವನ್ನೇ ನುಂಗಿದ

ಹೊಸದಿಲ್ಲಿ : ದೇಹ ಸದೃಢವಾಗಿರಬೇಕಾದರೆ ಕಬ್ಬಿಣದ ಅಂಶ ಬೇಕೆಂದು ಭೂಪನೊಬ್ಬ ನಾಣ್ಯ ಮತ್ತು ಆಯಸ್ಕಾಂತಗಳನ್ನೇ ನುಂಗಿದ್ದಾನೆ. ಕಬ್ಬಿಣದ ಸತು ದೇಹವನ್ನು ಸದೃಢವಾಗಿಸುತ್ತದೆ ಎಂದು ನಂಬಿ ಈತ 39 ನಾಣ್ಯಗಳು ಮತ್ತು 37 ಅಯಸ್ಕಾಂತಗಳನ್ನು ನುಂಗಿದ್ದ. ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಇವುಗಳನ್ನು ಹೊರತೆಗೆದಿದ್ದಾರೆ.

ದಿಲ್ಲಿಯ 26 ವರ್ಷದ ಯುವಕ 20 ದಿನಗಳಿಂದ ಹೊಟ್ಟೆನೋವು ಮತ್ತು ವಾಂತಿಯ ಸಮಸ್ಯೆಯಿಂದ ಬಳಲುತ್ತಿದ್ದ. ಆತ ಏನನ್ನೂ ತಿನ್ನದಿದ್ದರೂ ಹೊಟ್ಟೆನೋವು ಆಗುತ್ತಿತ್ತು. ಅನುಮಾನಗೊಂಡ ವೈದ್ಯರು, ಎಕ್ಸ್ ರೇ ತೆಗೆದು ನೋಡಿದಾಗ ಹೊಟ್ಟೆಯೊಳಗೆ ನಾಣ್ಯಗಳು ಹಾಗೂ ಅಯಸ್ಕಾಂತಗಳು ಇರುವುದು ಕಂಡುಬಂದಿದೆ. ಬಳಿಕ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಅವುಗಳನ್ನು ಹೊರಗೆ ತೆಗೆದಿದ್ದಾರೆ.

1, 2, 5 ರೂ. ಗಳ ನಾಣ್ಯಗಳು ಮತ್ತು ಹೃದಯ, ಗೋಳ, ನಕ್ಷತ್ರ, ಬುಲೆಟ್ ಮತ್ತು ತ್ರಿಕೋನ ಆಕಾರದ ಅಯಸ್ಕಾಂತಗಳನ್ನು ಆತ ನುಂಗಿದ್ದ. ಈ ಹಿಂದೆಯೂ ರೋಗಿಗಳು ಅಯಸ್ಕಾಂತ ಹಾಗೂ ನಾಣ್ಯಗಳನ್ನು ಸೇವಿಸಿದ ಸಾಕಷ್ಟು ಉದಾಹರಣೆಗಳಿವೆ ಎಂದು ಚಿಕಿತ್ಸೆ ನೀಡಿದ ವೈದ್ಯ ಡಾ. ತರುಣ್ ಮಿತ್ತಲ್ ಹೇಳಿದ್ದಾರೆ.





























































































































error: Content is protected !!
Scroll to Top