ಕಾರ್ಕಳ : ಖರ್ಚಿಗೆ ಹಣ ಕೊಡಲಿಲ್ಲ ಎಂದು ಹಿಂದಿನ ಮಾಲಕರನ್ನು ಕೆಲಸದವ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿರುವ ಘಟನೆ ಕಾಂತಾವರ ಸಮೀಪ ಫೆ. 20ರಂದು ಸಂಭವಿಸಿದೆ. ಗೋಪಾಲ ಎಂಬಾತ ವಿನ್ಸೆಂಟ್ ನೋಯಲ್ ಲೋಬೊ ಎಂಬವರ ಬಳಿ ಕೆಲಸ ಮಾಡುತ್ತಿದ್ದು, ಒಂದು ವರ್ಷದ ಹಿಂದೆ ಕೆಲಸ ಬಿಟ್ಟಿದ್ದ. ಬಳಿಕ ಆಗಾಗ ಖರ್ಚಿಗೆ ಹಣ ಕೇಳಿ ಪಡೆದುಕೊಳ್ಳುತ್ತಿದ್ದ. ಕೆಲ ಸಮಯದಿಂದ ಲೋಬೊ ಹಣ ಕೊಡುವುದನ್ನು ನಿಲ್ಲಿಸಿದ್ದರು. ಈ ಸಿಟ್ಟಿನಲ್ಲಿ ಮಂಗಳವಾರ ಸಂಜೆ ಲೋಬೊ ಸ್ಕೂಟರಿನಲ್ಲಿ ಮಂಗಳೂರಿನಿಂದ ಹಿಂದಿರುಗುತ್ತಿದ್ದಾಗ ಕಾಂತಾವಾರದಲ್ಲಿ ತಡೆದು ನಿಲ್ಲಿಸಿ ನಿಂದಿಸಿ ಪೈಪ್ನಿಂದ ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿದ್ದಾನೆ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಂತಾವರ : ಹಣ ಕೊಡದ ಸಿಟ್ಟಿನಲ್ಲಿ ಹಲ್ಲೆ






























































