ಕಾರ್ಕಳ : ಶಾಲೆಯ ಬಿಸಿಯೂಟ ತಯಾರಿಗೆ ಸಂಬಂಧಿಸಿದಂತೆ ಮುಖ್ಯ ಶಿಕ್ಷಕಿ ಬೈದು ನಿಂದಿಸಿದ್ದಾರೆ ಎಂದು ಬೈಲೂರು ಸರಕಾರಿ ಹಿರಿಯ ಪ್ರಾಥಮಿಕ ಮೈನ್ ಶಾಲೆಯ ಅಡುಗೆ ಸಹಾಯಕಿ ರಾಜೀವಿ ಎಂಬವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಫೆ. 6ರಂದು ಬಿಸಿಯೂಟದಲ್ಲಿ ಮಕ್ಕಳಿಗೆ ಕಲ್ಲು ಸಿಕ್ಕಿದ್ದು, ಈ ಕುರಿತು ಎಸ್‌ಡಿಎಂಸಿಗೆ ಮಕ್ಕಳ ಪೋಷಕರು ದೂರು ನೀಡಿದ್ದರು. ಎಸ್‌ಡಿಎಂಸಿಯವರು ರಾಜೀವಿ ಅವರಿಗೆ ಬುದ್ಧಿಮಾತು ಹೇಳಿ ಮುಂದೆ ಹೀಗಾಗದಂತೆ ನೋಡಿಕೊಳ್ಳಲು ಸೂಚಿಸಿದ್ದರು. ಅನಂತರ ಫೆ. 17ರಂದು ಮುಖ್ಯ ಅಡುಗೆಯವರು ರಜೆಯಲ್ಲಿದ್ದ ಸಂದರ್ಭ ಮುಖ್ಯ ಶಿಕ್ಷಕಿ ಸುಮಾದೇವಿ ಅಡುಗೆ ಸಹಾಯಕಿ ರಾಜೀವಿ ಒಬ್ಬರನ್ನೇ ಹೊಣೆಗಾರರನ್ನಾಗಿ ಬೈದು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ರಾಜೀವಿ ಕಳೆದ 20 ವರ್ಷಗಳಿಂದ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೈಲೂರು : ಮುಖ್ಯ ಶಿಕ್ಷಕಿ ವಿರುದ್ಧ ಅಡುಗೆ ಸಹಾಯಕಿ ದೂರು






























































