ಕಾರ್ಕಳ : ವಿದ್ಯುತ್ ಅವಘಡ ಸಂಭವಿಸಿ ಕಾರ್ಕಳ ಮೆಸ್ಕಾಂ ಸಿಬ್ಬಂದಿ ಸಾವನಪ್ಪಿರುವ ಘಟನೆ ಜ. 28ರಂದು ನೂರಾಳ್ ಬೆಟ್ಟುವಿನಲ್ಲಿ ಸಂಭವಿಸಿದೆ. ಬಾಗಲಕೋಟೆಯ ಶ್ರೀನಿವಾಸ್ (28) ಮೃತ ದುರ್ದೈವಿ
ಕರೆಂಟ್ ಇಲ್ಲವೆಂದು ಸ್ಥಳೀಯರು ಹೊಸ್ಮಾರು ಮೆಸ್ಕಾಂ ಶಾಖೆಗೆ ಕರೆ ಮಾಡಿರುವ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಶ್ರೀನಿವಾಸ್ ಟ್ರಾನ್ಸ್ ಪಾರ್ಮರ್ ನಲ್ಲಿ ನಲ್ಲಿ ಫಾಲ್ಟ್ ಚೆಕ್ ಮಾಡುವ ವೇಳೆ ಈ ದುರ್ಘಟನೆ ಸಂಭವಿಸಿದೆ. ವಿದ್ಯುತ್ ಶಾಕ್ ನಿಂದ ಶ್ರೀನಿವಾಸ್ ನೆಲಕ್ಕುರುಳಿದ್ದು ಈ ಸಂದರ್ಭ ಅಲ್ಲಿ ಯಾರು ಇರಲಿಲ್ಲ ಎಂದು ಹೇಳಲಾಗುತ್ತಿದೆ. 2 ವರ್ಷದ ಹಿಂದೆ ಶ್ರೀನಿವಾಸ್ ಮೆಸ್ಕಾಂ ಇಲಾಖೆಗೆ ಸೆರ್ಪಡೆಗೊಂಡಿದ್ದರು. ಮೃತದೇಹ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆ ಶವಾಗಾರಲ್ಲಿದೆ .
ಆಸ್ಪತ್ರೆಗೆ ಸುನಿಲ್ ಕುಮಾರ್ ಭೇಟಿ
ಘಟನೆ ಕುರಿತು ಮಾಹಿತಿ ಪಡೆದ ಶಾಸಕ ಸುನಿಲ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿದರು. ಈ ವೇಳೆ ಕಾರ್ಕಳ ಉಪವಿಭಾಗ ಇಇ ನರಸಿಂಹ ಮತ್ತಿತರರಿದ್ದರು.


































































