ಕಾರ್ಕಳ : ಕೌಡೂರು ಗ್ರಾಮದ ರತಿ ನಾಯ್ಕ ಅವರಿಗೆ ಕೃಷಿ ಇಲಾಖೆ ಕೃಷಿ ಪ್ರಶಸ್ತಿ ನೀಡಿ ಗೌರವಿಸಿದೆ. ಜ. 26ರಂದು ಮಂಜುನಾಥ ಪೈ ಸಭಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ರತಿ ಅವರು 2022-23ನೇ ಸಾಲಿನ ರೈತ ಮಹಿಳೆ ವಿಭಾಗದಲ್ಲಿ ಹೆಕ್ಟೇರಿಗೆ 62.31 ಕ್ವಿಂಟಾಲ್ ಇಳುವರಿ ಪಡೆದು ತಾಲೂಕು ಮಟ್ಟದ ಭತ್ತದ ಬೆಳೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಕೌಡೂರು ರತಿ ನಾಯ್ಕ ಅವರಿಗೆ ಕೃಷಿ ಪ್ರಶಸ್ತಿ
































































