ಜ. 25-29 : ಹಿರ್ಗಾನ ಶ್ರೀ ವಿಷ್ಣುಮೂರ್ತಿ ಮತ್ತು ಮಹಾಗಣಪತಿ ದೇವಸ್ಥಾನ – ವಾರ್ಷಿಕ ಗೌಣೋತ್ಸವ

ಕಾರ್ಕಳ : ಚಿಕ್ಕಲ್‌ಬೆಟ್ಟು ಹಿರ್ಗಾನ ಶ್ರೀ ವಿಷ್ಣುಮೂರ್ತಿ ಮತ್ತು ಮಹಾಗಣಪತಿ ದೇವಸ್ಥಾನದ ವಾರ್ಷಿಕ ಗೌಣೋತ್ಸವ ಜ. 25 ರಿಂದ 29 ರವರೆಗೆ ನಡೆಯಲಿದೆ.
ವೇದಮೂರ್ತಿ ಜಾರ್ಕಳ ಪ್ರಸಾದ ತಂತ್ರಿಯವರು ಮತ್ತು ಅರ್ಚಕ ಲಕ್ಷ್ಮೀ ಜನಾರ್ಧನ ಭಟ್‌ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ.

ಜ. 25 ರಂದು ಬೆಳಗ್ಗೆ ದೇವತಾ ಪ್ರಾರ್ಥನೆಯಾಗಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ. ರಾತ್ರಿ ಭಜನಾ ಕಾರ್ಯಕ್ರಮ, ದೀಪಾರಾಧನೆ ಪೂಜೆ, ಉತ್ಸವ ಬಲಿ, ವಾಲಗ ಮಂಟಪ ಪೂಜೆ ಅಷ್ಟವಾದನ ಸೇವೆ, ಅಂಬೋಡಿ ಬಲಿ, ಏಕಾಂತ ಸೇವೆ ನಡೆಯಲಿದೆ.

ಜ. 26 ರಂದು ಬೆಳಿಗ್ಗೆ ಪಂಚಗವ್ಯ ಪುಣ್ಯಾಹ, ನವಕ ಕಲಶಾಭಿಷೇಕ, ಮಹಾಪೂಜೆ, ಶ್ರೀ ನಾಗದೇವರ ಸನ್ನಿಧಿಯಲ್ಲಿ ನವಕಪ್ರಧಾನ ಕಲಾಶಾಭಿಷೇಕ, ಆಶ್ಲೇಷಾಬಲಿ ನಡೆಯಲಿದ. ಸಂಜೆ 6ರಿಂದ 8 ರವರೆಗೆ ಭಜನಾ ಸಂಧ್ಯಾ ಕಾರ್ಯಕ್ರಮ, ರಾತ್ರಿ ಬೈಗಿನ ಬಲಿ, ರಾತ್ರಿ ಪೂಜೆ, ಏಕಾಂತ ಸೇವೆ, ಜ. 27 ರಂದು ಬೆಳಗ್ಗೆ ಶ್ರೀ ದೇವರಿಗೆ ಪಂಚಗವ್ಯ, ಪುಣ್ಯಾಹ, ನವಕ ಕಲಾಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಸವಾರಿ ಬಲಿ ಮತ್ತು ಶ್ರೀ ಭೂತ ಬಲಿ, ಕವಾಟ ಪೂರಣ, ಸಾರ್ವತ್ರಿಕರಿಂದ ವಂದನಾರ್ಪಣೆ ನಡೆಯಲಿದೆ.

ಜ. 28 ರಂದು ಬೆಳಗ್ಗೆ ಕವಾಟೋದ್ಘಾಟನೆ, ದೇವರಿಗೆ ದಶವಿಧಿ ಸ್ನಾನ, ಪಂಚಾಮೃತ ಪುರಸ್ಸರ ಕಲಾಶಾಭಿಷೇಕ, ಮಂಗಳಾರತಿ, ಅಷ್ಟವಾದನ ಸೇವೆ, ಪರಿವಾರ ಪೂಜೆ, ತುಲಭಾರದಿ ಹರಕೆ ಸೇವೆ, ಶ್ರೀ ಮಹಾಗಣಪತಿ ದೇವರಿಗೆ 108 ತೆಂಗಿನ ಕಾಯಿ ಗಣಯಾಗ, ಅಪ್ಪದ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 5 ಗಂಟೆಗೆ ಶ್ರೀ ಕೊಡಮಣಿತ್ತಾಯ ಸ್ಥಾನದಿಂದ ಭಂಡಾರ ಇಳಿಯುವುದು, 7 ಗಂಟೆಗೆ ಶ್ರೀ ದೇವರಿಗೆ ಪ್ರಸನ್ನ ಪೂಜೆ, 9ಗಂಟೆಗೆ ರಾಜಂದೈವ, ಕೊಡಮಣಿತ್ತಾಯ, ಕುಕ್ಕಿನಂತಾಯ, ರಕ್ತೇಶ್ವರಿ, ಬೈದರ್ಕಳ ನೇಮೋತ್ಸವ, ರಾತ್ರಿ 3 ಗಂಟೆಗೆ ಬಲಿ, ಓಕುಳಿ, ಅವಭೃತ ಸ್ನಾನ, ತದನಂತರ ಧ್ವಜಾವರೋಹಣ, ಭಜನೆ ಪ್ರಾರಂಭ, ಮಹಾಮಂಗಳಾರತಿ ನಡೆಯಲಿದೆ.

ಜ. 29ರಂದು ಸಂಪ್ರೋಕ್ಷಣೆ, ಮಹಾಪೂಜೆ, ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ, ರಾತ್ರಿ ಭಜನೆ ಪೂಜೆ ನಡೆಯಲಿದೆ.

ಫೆ. 6ರಂದು ಮಧ್ಯಾಹ್ನ ಮಹಾಪೂಜೆ, ಸಮಾರಾಧನೆ, ರಾತ್ರಿ ಭಜನಾ ಮಂಗಲೋತ್ಸವ, ಮಾರಿ, ಗೋಂದೂಳು ವಗೈರ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.





























































































































error: Content is protected !!
Scroll to Top