ಕಾರ್ಕಳ : ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕಾರ್ಕಳದ ಶ್ರೀ ಅನಂತಪದ್ಮನಾಭ ದೇವಸ್ಥಾನಕ್ಕೆ ಜ. 16ರಂದು ಭೇಟಿ ನೀಡಿದರು.
ಶ್ರೀಪಾದರನ್ನು ಕಾರ್ಕಳ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಸೌಜನ್ಯ ಉಪಾಧ್ಯಾಯ ಅವರು ದೇವಸ್ಥಾನದ ಸಂಪ್ರದಾಯದಂತೆ ಬರಮಾಡಿಕೊಂಡರು. ಶ್ರೀಪಾದರು ತಮ್ಮ ಚತುರ್ಥ ಪರ್ಯಾಯದ ಯೋಜನೆಯಂತೆ ಕೋಟಿ ಗೀತಾ ಯಜ್ಞದ ಬಗ್ಗೆ ಮಾತನಾಡಿ, ವಿಶ್ವ ಗೀತಾ ಪರ್ಯಾಯೋತ್ಸವಕ್ಕೆ ಆಹ್ವಾನಿಸಿ, ಎಲ್ಲರಿಗೂ ಫಲ ಮಂತ್ರಾಕ್ಷತೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಬಾಲಕೃಷ್ಣ ರಾವ್, ವೈ. ಸುಧಾಕರ್ ಭಟ್, ಶ್ರೀರಾಮ ಭಟ್, ವೈ. ಪ್ರಶಾಂತ್ ಭಟ್, ಅನಂತಕೃಷ್ಣ ಆಚಾರ್, ರತ್ನಾಕರ ಮರಾಠೆ, ಕೇಶವ ಮರಾಠೆ, ಸುಬ್ರಮಣ್ಯ ಭಟ್ ರೆಂಜಾಳ, ಅನಂತಪದ್ಮನಾಭ ತಂತ್ರಿ, ನಾರಾಯಣ್ ಭಟ್, ಕೃಷ್ಣ ಭಟ್, ಅರುಣ ಉಪಾಧ್ಯಾಯ, ಜನಾರ್ಧನ್ ಇಡ್ಯಾ, ದಿನೇಶ್ ಭಟ್ ಕೈಲಾಜೆ, ಚಂದ್ರಶೇಖರ ಎಂ., ಪದ್ಮನಾಭ ಮರಾಠೆ, ವೈ. ಅನಂತಪದ್ಮನಾಭ ಭಟ್, ರಾಜೇಶ್ ಗೋರೆ, ಹರೀಶ್ಚಂದ್ರ ಚಿಪ್ಳೂಂಕರ್, ನಿರಂಜನ್ ಚಿಪ್ಳೂಂಕರ್, ದೇವಸ್ಥಾನದ ಅರ್ಚಕರಾದ ಶಂಕರನಾರಾಯಣ ಭಟ್ ಹಾಗೂ ರಾಜೇಶ್ ನೆಡ್ಯಾಂತಿಲ್ಲಾಯ ಮತ್ತು ತಾಲೂಕಿನ ತ್ರಿಮತಸ್ತ ಬ್ರಾಹ್ಮಣ ಸಮಾಜ ಬಾಂಧವರು ಉಪಸ್ಥಿತರಿದ್ದರು. ಇದೇ ಸಂದರ್ಭ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಶಿರಸಿ ಸಾರ್ವಜನಿಕ ಗೀತಾ ಜಯಂತಿ ಕಾರ್ಕಳ ಇವರ ವತಿಯಿಂದ ಗೀತಾ ಪಾರಾಯಣ ನಡೆಯಿತು.




































































