ಹಮಾಸ್ ಉಗ್ರರನ್ನು ದೇಶ ಪ್ರೇಮಿಗಳು ಎಂದ ಮಂಗಳೂರಿನ ಝಾಕೀರ್‌

ಮಂಗಳೂರು : ಇಸ್ರೇಲ್ ಮತ್ತು ಪ್ಯಾಲೇಸ್ತೇನ್ ನಡುವಿನ ಯುದ್ದ ತಾರಕಕ್ಕೇರಿದೆ. ಹಮಾಸ್ ಉಗ್ರರು ಸಾವಿರಾರು ಅಮಾಯಕರ ಜೀವ ಬಲಿ ಪಡೆದಿದ್ದಾರೆ‌. ಆದರೆ ಮಂಗಳೂರಿನ ವ್ಯಕ್ತಿಯೊಬ್ಬ ಹಮಾಸ್ ಉಗ್ರರಿಗೆ ಜಯ ಸಿಗಲಿ, ಅವರು ದೇಶಪ್ರೇಮಿಗಳು ಎಂದು ಕರೆದು ವಿಡಿಯೋ ಮಾಡಿ ವಿವಾದ ಸೃಷ್ಟಿಸಿದ್ದಾನೆ.

ಪ್ಯಾಲೆಸ್ತೀನ್, ಗಾಜಾ ಹಾಗೂ ದೇಶಪ್ರೇಮಿ ಹಮಾಸ್ ಯೋಧರಿಗೆ ವಿಜಯವಾಗಲು ಪ್ರಾರ್ಥಿಸಿ ಎಂದು ಮನವಿ ಮಾಡಿರೋ ಆತ, ಶುಕ್ರವಾರದ ನಮಾಜ್ ನಲ್ಲಿ ಪ್ರತ್ಯೇಕವಾಗಿ ಪ್ರಾರ್ಥಿಸಿ ಅಂತ ವಿಶ್ವ ಖಬ್ರುಸ್ತಾನ್ ಪ್ರೇಮಿ ಸಂಘದ ಸದಸ್ಯರಿಗೆ ಕರೆ ಕೊಟ್ಟಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಝಾಕಿರ್ ವಿಡಿಯೋ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಸದ್ಯ ಉಗ್ರರಿಗೆ ಬೆಂಬಲ ಕೊಡುವ ಇವನ ಮೇಲೆ ಮಂಗಳೂರು ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಲಿ ಎಂದು ಹಿಂದೂ‌ ಪರ ಸಂಘಟನೆಗಳು ಆಗ್ರಹಿಸಿದೆ. ವಿರೋಧ ವ್ಯಕ್ತಪಡಿಸಿದ್ದು, ಝಾಕಿರ್​ನನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಪೌರತ್ವ ಕಾಯ್ದೆ ಗಲಭೆಯಲ್ಲೂ ಇತನ ವಿಡಿಯೋ ವೈರಲ್
ಝಾಕೀರ್ 2019ರಲ್ಲೂ ಇದೇ ರೀತಿ ವಿಡಿಯೋ ಮಾಡಿ ಹರಿಬಿಟ್ಟಿದ್ದ. ಪೌರತ್ವ ಕಾಯ್ದೆ ವಿರುದ್ದ ಭಾರೀ ಪ್ರತಿಭಟನೆ ನಡೆಸಲು ಕರೆ ಕೊಟ್ಟಿದ್ದ ಝಾಕೀರ್ ನ ಆ ವಿಡಿಯೋ, ಅಂದು ಮಂಗಳೂರು ಗಲಭೆಗೂ ಮುನ್ನ ವೈರಲ್ ಆಗಿತ್ತು. 2019ರ ಡಿ.20ರ ಶುಕ್ರವಾರ ನೆಹರೂ ಮೈದಾನಕ್ಕೆ ಬರುವಂತೆ ಕರೆ ಕೊಟ್ಟಿದ್ದ. ಆ ಬಳಿಕ ಸಿಎಎ ಪ್ರತಿಭಟನೆ ಮಂಗಳೂರಿನಲ್ಲಿ ಭಾರೀ ಗಲಭೆ ಸೃಷ್ಟಿಸಿತ್ತು



















































































error: Content is protected !!
Scroll to Top